Kornersite

Just In Sports

ಗುಜರಾತ್ ಮಕಾಡೆ ಮಲಗಿಸಿ ಫೈನಲ್ ಪ್ರವೇಶಿಸಿದ ಚೆನ್ನೈ; 2ನೇ ಎಲಿಮಿನೇಟರ್ ಗೆ ಟೈಟಾನ್ಸ್!

Chennai : ಉತ್ತಮ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಪ್ರದರ್ಶನದಿಂದಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings), ಹಾಲಿ ಚಾಂಪಿಯನ್ಸ್‌ ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ 15 ರನ್‌ ಭರ್ಜರಿ ಜಯ ಸಾಧಿಸುವದರ ಮೂಲಕ 10ನೇ ಬಾರಿಗೆ ಐಪಿಎಲ್‌ ಫೈನಲ್‌ ಗೆ ಪ್ರವೇಶ ಮಾಡಿದೆ.

ಐಪಿಎಲ್‌ನಲ್ಲಿ (IPL 2023) 4 ಬಾರಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿರುವ ಚೆನ್ನೈ 10ನೇ ಬಾರಿ ಫೈನಲ್‌ ಪ್ರವೇಶಿಸಿದೆ. ಮೊದಲ ಆವೃತ್ತಿಯಲ್ಲೇ ಚಾಂಪಿಯನ್‌ ಆದ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಟೈಟಾನ್ಸ್‌ ಸೋತು 2ನೇ ಎಲಿಮಿನೇಟರ್‌ ಹಂತ ತಲುಪಿದೆ. ಇಂದು ಮುಂಬಯಿ ಇಂಡಿಯನ್ಸ್‌ (Mumbai Indians) ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ (LSG) ವಿರುದ್ಧ ಮೊದಲ ಎಲಿಮಿನೇಟರ್‌ ಪಂದ್ಯ ನಡೆಯಲಿದ್ದು, ಗೆದ್ದ ತಂಡದೊಂದಿಗೆ 2ನೇ ಎಲಿಮಿನೇಟರ್‌ ಪಂದ್ಯದಲ್ಲಿ ಟೈಟಾನ್ಸ್‌ ಸೆಣಸಲಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ 20 ಓವರ್‌ ಗಳಲ್ಲಿ 7 ಕಳೆದುಕೊಂಡು 172 ರನ್‌ ಗಳನ್ನು ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಹಾಲಿ ಚಾಂಪಿಯನ್ಸ್‌ ಗುಜರಾತ್‌ ಟೈಟಾನ್ಸ್‌ 20 ಓವರ್‌ ಗಳಲ್ಲಿ 157 ರನ್ ಗಳನ್ನು ಮಾತ್ರ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಟೈಟಾನ್ಸ್‌ ಗೆ ಉತ್ತಮ ಆರಂಭ ಸಿಗಲಿಲ್ಲ. 22 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿತು. ಬಳಿಕ ನಿಧಾನಗತಿ ಬ್ಯಾಟಿಂಗ್‌ನೊಂದಿಗೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಧೋನಿ ಮ್ಯಾಜಿಕ್‌ ನೊಂದಿಗೆ ಬೌಲಿಂಗ್‌ ನಲ್ಲಿ ಉತ್ತಮ ಹಿಡಿತ ಸಾಧಿಸಿದ ಚೆನ್ನೈ ತಂಡವು ಬ್ಯಾಟ್ಸಮನ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಶುಭಮನ್‌ ಗಿಲ್‌ (Shubman Gill) 42 ರನ್‌, ವೃದ್ಧಿಮಾನ್‌ ಸಾಹಾ 12 ರನ್‌, ದಸುನ್‌ ಶನಾಕ 17 ರನ್‌, ವಿಜಯ್‌ ಶಂಕರ್‌ 14 ರ, ಕೊನೆಯಲ್ ಸ್ಫೋಟಕ ಆಟ ಪ್ರದರ್ಶಿಸಿದ ರಶೀದ್‌ ಖಾನ್‌ 16 ಎಸೆತಗಳಲ್ಲಿ 30 ರನ್‌ ಗಳಿಸಿತು. ಆದರೂ ಗುಜರಾತ್ ತಂಡವು ಸೋಲು ಕಾಣುವಂತಾಯಿತು. ಚೆನ್ನೈ ಪರ ದೀಪಕ್‌ ಚಹಾರ್‌, ಮಹೀಶ್‌ ತೀಕ್ಷಣ ಹಾಗೂ ರವೀಂದ್ರ ಜಡೇಜಾ, ಮಥೀಶ ಪತಿರಣ ತಲಾ 2 ವಿಕೆಟ್‌ ಕಿತ್ತರೆ ತುಷಾರ್‌ ದೇಶ್‌ಪಾಂಡೆ ಒಂದು ವಿಕೆಟ್‌ ಪಡೆದು ಮಿಂಚಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಚೈನ್ನೈ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಹಾಗೂ ಡಿವೋನ್‌ ಕಾನ್ವೆ (Devon Conway) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 10.3 ಓವರ್‌ಗಳಲ್ಲಿ 87 ರನ್‌ ಗಳಿಸಿತ್ತು. ಋತುರಾಜ್‌ 44 ಎಸೆತಗಳಲ್ಲಿ ಭರ್ಜರಿ 66 ರನ್‌ ಕಾನ್ವೆ 40 ರನ್‌ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ 17 ರನ್‌, ಅಂಬಟಿ ರಾಯುಡು 17 ರನ್‌ ಹಾಗೂ ರವೀಂದ್ರ ಜಡೇಜಾ 22 ರನ್‌, ಮೊಯಿನ್‌ ಅಲಿ 9 ರನ್‌ ಗಳಿಸಿ ತಂಡ ಮೊತ್ತ 170ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಗುಜರಾತ್‌ ಪರ ಮೊಹಮ್ಮದ್‌ ಶಮಿ ಹಾಗೂ ಮೋಹಿತ್‌ ಶರ್ಮಾ ತಲಾ 2 ವಿಕೆಟ್‌ ಕಿತ್ತರೆ, ದರ್ಶನ್‌ ನಾಲ್ಕಂಡೆ, ರಶೀದ್‌ ಖಾನ್‌ ಹಾಗೂ ನೂರ್‌ ಅಹ್ಮದ್‌ ತಲಾ ಒಂದೊಂದು ವಿಕೆಟ್‌ ಪಡೆದರು.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್