Kornersite

Bengaluru International Just In Karnataka National State

Tipu Sultan’s sword: ಲಂಡನ್ ನಲ್ಲಿ ಬರೋಬ್ಬರಿ 145 ಕೋಟಿ ರೂ.ಗೆ ಹರಾಜಾದ ಟಿಪ್ಪು ಖಡ್ಗ!

ಲಂಡನ್ : ಮದ್ಯದ ದೊರೆ ವಿಜಯ್ ಮಲ್ಯ (Vijay Mallya) ಖರೀದಿಸಿದ್ದ ಟಿಪ್ಪು ಸುಲ್ತಾನ್‌ ನ ಖಡ್ಗ (Tipu Sultan’s sword) 145 ಕೋಟಿ ರೂ.ಗೆ ಹರಾಜಾಗಿದೆ.

ಖಡ್ಗವನ್ನು ಲಂಡನ್‍ನಲ್ಲಿ ಬೋನ್‍ಹ್ಯಾಮ್ ಹರಾಜು ಸಂಸ್ಥೆ ಹರಾಜು ಹಾಕಿದ್ದು 145 ಕೋಟಿ ರೂ.ಗೆ ಮಾರಾಟವಾಗಿದೆ. ಗೌಪ್ಯತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಖಡ್ಗವನ್ನು ಖರೀದಿ ಮಾಡಿದ ವ್ಯಕ್ತಿಯ ಹೆಸರನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಬೋನ್‍ಹ್ಯಾಮ್ ಹೌಸ್ ಸಂಯೋಜಕ ಎನ್ರಿಕಾ ಮೆಡುಗ್ನೊ ತಿಳಿಸಿದ್ದಾರೆ.

2004ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕಟ್ಟಿಕೊಂಡು ಸ್ಪರ್ಧೆಗೆ ಇಳಿದಿದ್ದ ಮಲ್ಯ, ಪ್ರಚಾರದ ತಂತ್ರವಾಗಿ ಖಡ್ಗ ಬಳಸಿಕೊಂಡಿದ್ದರು. ಅವರ ಸಮೇತ ಜನತಾ ಪಕ್ಷದ ಎಲ್ಲ ಅಭ್ಯರ್ಥಿಗಳು ಸೋಲು ಕಂಡಿದ್ದರು. ಆನಂತರ ವಿಜಯ್ ಮಲ್ಯ ದಿವಾಳಿಯಾಗಿ ದೇಶದಿಂದಲೇ ಪಲಾಯನ ಮಾಡಿದ್ದರು. ಇದಕ್ಕೆ ಖಡ್ಗವೇ ಕಾರಣ ಎಂದು ಹೇಳಲಾಗುತ್ತಿತ್ತು.

1799ರಲ್ಲಿ ನಡೆದ 4ನೇ ಆಂಗ್ಲೊ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ (Tipu Sultan) ಮರಣ ಹೊಂದಿದ ನಂತರ ಅರಮನೆಯಲ್ಲಿ ಪತ್ತೆಯಾಗಿದ್ದ ಖಡ್ಗವನ್ನು ತೆಗೆದುಕೊಂಡು ಹೋಗಿದ್ದ ಬ್ರಿಟಿಷ್ ಸೇನೆ ಮೆಜರ್ ಜನರಲ್ ಬೇರ್ಡೆಗೆ ಹಸ್ತಾಂತರಿಸಿತ್ತು. ಬ್ರಿಟಿಷ್ ರಾಜಮನೆತನದ ವಸ್ತು ಸಂಗ್ರಹಾಲಯದಲ್ಲಿದ್ದ ಟಿಪ್ಪು ಖಡ್ಗವನ್ನು 2004 ರಲ್ಲಿ ವಿಜಯ್ ಮಲ್ಯ 1.57 ಕೋಟಿ ರೂ.ಗೆ ಹರಾಜಿನಲ್ಲಿ ಖರೀದಿಸಿದ್ದರು.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ