Kornersite

Just In Sports

MS Dhoni: ಮಹೇಂದ್ರಸಿಂಗ್ ಧೋನಿಗೆ ಫೈನಲ್ ನಿಂದ ಬ್ಯಾನ್ ಭೀತಿ?

ಐಪಿಎಲ್ ನ ಮೊದಲ ಕ್ವಾಲಿಫೈಯರ್ ಪಂದ್ಯವನ್ನು ಈಗಾಗಲೇ ಸೂಪರ್ ಕಿಂಗ್ ಗೆದ್ದಿದೆ. ಆದರೆ, ನಾಯಕ ಮಹೇಂದ್ರ ಸಿಂಗ್ ಧೋನಿ ಫೈನಲ್ ಪಂದ್ಯದಿಂದ ಹೊರಗೆ ಉಳಿಯುವ ಭೀತಿ ಎದುರಿಸುತ್ತಿದ್ದಾರೆ.

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದನ್ನು ಮ್ಯಾಚ್ ರೆಫರಿ ಗಂಭೀರವಾಗಿ ಪರಿಗಣಿಸಿದ್ದಾರೆ. ಇನಿಂಗ್ಸ್ನ 16ನೇ ಓವರ್ ನಲ್ಲಿ ಧೋನಿ ಯುವ ವೇಗಿ ಮಥೀಶ ಪತಿರಾಣಗೆ ಅವಕಾಶ ನೀಡಿದ್ದರು. ಆದರ ಅದಾಗಲೇ ಮೈದಾನದಿಂದ 9 ನಿಮಿಷಗಳ ಕಾಲ ಹೊರಗಿದ್ದ ಪತಿರಾಣ ಅವರನ್ನು ಅಂಪೈರ್ ತಡೆದರು. ನಿಯಮಗಳಂತೆ ಆಟಗಾರರೊಬ್ಬರು ಮೈದಾನದಿಂದ ಹೊರಗುಳಿದ ಸಮಯದಷ್ಟೇ ಸಮಯ ಮೈದಾನದಲ್ಲಿರಬೇಕಾಗುತ್ತದೆ.

ಅಂದರೆ ಮಾತ್ರ ಬೌಲಿಂಗ್ಗೆ ಅರ್ಹರಾಗಿರುತ್ತಾರೆ. ಆದರೆ ಪತಿರಾಣ ಬೌಲಿಂಗ್ ಮಾಡಲು ಬಂದಾಗ ಕೇವಲ 4 ನಿಮಿಷಗಳಾಗಿತ್ತು. ಈ ನಿಯಮವನ್ನು ಅಂಪೈರ್ ಧೋನಿಗೆ ವಿವರಿಸಿದ್ದರು.ಈ ಸಂದರ್ಭದಲ್ಲಿ ಧೋನಿ ಲೆಗ್ ಅಂಪೈರ್ ಹಾಗೂ ಸ್ಟ್ರೈಟ್ ಅಂಪೈರ್ಗಳ ಜೊತೆ ನಿಯಮಗಳ ಬಗ್ಗೆ ಚರ್ಚಿಸಿದರು. ಈ ಚರ್ಚೆಯ ಮೂಲಕ 4 ನಿಮಿಷಗಳ ಆಟವನ್ನು ವ್ಯರ್ಥ ಮಾಡಿದ್ದರು. ಇದರೊಂದಿಗೆ ಮಥೀಶ ಪತಿರಾಣ ಅವರು ಫೀಲ್ಡ್ನಲ್ಲಿರಬೇಕಾದ ಸಮಯ ಕೂಡ ಪೂರ್ಣಗೊಂಡಿತು. ಆ ನಂತರ ಅಂಪೈರ್ ನಿಯಮದಂತೆಯೇ ಬೌಲಿಂಗ್ ಮಾಡಿಸಿದ್ದರು. ಈ ಕುರಿತು ಸೈಮನ್ ಡೌಲ್, ಸುನಿಲ್ ಗಾವಸ್ಕರ್, ಹರ್ಷ ಬೋಗ್ಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಚರ್ಚೆ ನಡೆಯುತ್ತಿದೆ.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್