Kornersite

Crime Just In National

Crime: ಕೊಟ್ಟ ಹಣ ಕೇಳಿದ್ದಕ್ಕೆ ಘನಘೋರ ಕೊಲೆ ಮಾಡಿ, ಪ್ರಿಡ್ಜ್ ನಲ್ಲಿಟ್ಟ ಪಾಪಿ!

ಹೈದರಾಬಾದ್ : ಕೊಟ್ಟ ಹಣ ಕೇಳಿದ್ದಕ್ಕೆ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ವ್ಯಕ್ತಿಯೊಬ್ಬ ತನ್ನ ಮಹಿಳಾ ಪಾರ್ಟ್‌ ನರ್‌ ಳನ್ನೇ ಕೊಲೆ ಮಾಡಿ ದೇಹವನ್ನು ತುಂಡು ತುಂಡಾಗಿ ಮಾಡಿ ಫ್ರಿಡ್ಜ್ (Body Fridge) ನಲ್ಲಿಟ್ಟಿ ಇಟ್ಟಿದ್ದಾನೆ. ಅನುರಾಧ ರೆಡ್ಡಿ(55) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಚಂದ್ರಮೋಹನ್(48) ಕೊಲೆ ಮಾಡಿದ ಆರೋಪಿ. ಮೂಸಿ ನದಿ ಹತ್ತಿರದ ಅಫ್ಜಲ್ ನಗರದ ಸಮುದಾಯ ಭವನದ ಹತ್ತಿರ ಮಹಿಳೆಯ ತಲೆ ಪತ್ತೆಯಾಗಿತ್ತು. ಇದನ್ನು ಪೌರ ಕಾರ್ಮಿಕರೊಬ್ಬರು ಗಮನಿಸಿದ್ದು ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು 8 ತಂಡಗಳನ್ನು ರಚಿಸಿ ತನಿಖೆಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಆರೋಪಿ ಚಂದ್ರ ಮೋಹನ್ ಹಾಗೂ ಮೃತ ಮಹಿಳೆ ಅನುರಾಧ ರೆಡ್ಡಿ ನಡುವೆ ಅಕ್ರಮ ಸಂಬಂಧ ಇರುವುದು ಬಯಲಾಗಿದೆ ಎಂದು ಆಗ್ನೇಯ ವಲಯ ಡಿಸಿಪಿ ರೂಪೇಶ್ ತಿಳಿಸಿದ್ದಾರೆ.2018ರಲ್ಲಿ ಅನುರಾಧಗೆ ಚಂದ್ರ ಮೋಹನ್ ತನ್ನ ಮನೆಯ ನೆಲ ಮಹಡಿಯಲ್ಲಿ ವಾಸಿಸಲು ಜಾಗ ನೀಡಿದ್ದ. ಈ ಸಂದರ್ಭದಲ್ಲಿ ಮೃತಳಿಂದ 7 ಲಕ್ಷ ರೂ. ಹಣ ಪಡೆದು ಹಿಂದಿರುಗಿಸದೆ ಸತಾಯಿಸುತ್ತಿದ್ದ. ಮಹಿಳೆ ಹಣ ನೀಡುವಂತೆ ಚಂದ್ರಮೋಹನ್ ನನ್ನು ಪೀಡಿಸುತ್ತಿದ್ದಳು. ಮಹಿಳೆಯ ಒತ್ತಡದಿಂದ ಸಿಟ್ಟಿಗೆದ್ದ ಚಂದ್ರಮೋಹನ್ ಆಕೆಯನ್ನು ಮುಗಿಸುವ ಚಿಂತನೆ ಮಾಡಿದ್ದಾನೆ.

ಅಂತೆಯೇ ಮೇ 12ರಂದು ಹಣ ಹಿಂದಿರುಗಿಸುವ ನೆಪದಲ್ಲಿ ಆರೋಪಿ, ಮೃತಳ ಜೊತೆ ಗಲಾಟೆ ತೆಗೆದಿದ್ದಾನೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಮೃತ ದೇಹ ಸಾಗಿಸುವ ನಿಟ್ಟಿನಲ್ಲಿ ಆರೋಪಿಯೂ ಕಲ್ಲು ಕತ್ತರಿಸುವ 2 ಮೆಷಿನ್‍ ಗಳನ್ನು ತಂದಿದ್ದಾನೆ. ನಂತರ ದೇಹದ ಭಾಗಗಳನ್ನು ಮನಬಂದಂತೆ ತುಂಡರಿಸಿ ಪ್ಲಾಸ್ಟಿಕ್ ಕವರಿನಲ್ಲಿ ತುಂಬಿಸಿ ನಗರದ ವಿವಿಧೆಡೆ ಎಸೆದಿದ್ದಾನೆ. ಕೈ ಕಾಲುಗಳನ್ನು ಫ್ರಿಡ್ಜ್ ನಲ್ಲಿ ಇರಿಸಿದ್ದಾನೆ. ಸದ್ಯ ಎಲ್ಲ ಸತ್ಯ ಬಯಲಾಗಿದೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ