ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮೇ 28 ರಂದು ಉದ್ಘಾಟನೆ ಮಾಡಲಿರುವ ಹೊಸ ಸಂಸತ್ ಭವನದ (New Parliament building) ವಿಡಿಯೋ ಟ್ವೀಟ್ ಮಾಡಿದ್ದಾರೆ.
ಹಳೇ ಸಂಸತ್ ಭವನವನ್ನು ಬದಲಿಸುವ ಹೊಸ ರಚನೆಯ ಕುರಿತು ಆಲೋಚನೆಗಳನ್ನು ತಿಳಿಸುವ ವಿಡಿಯೊವನ್ನು ತಮ್ಮದೇ ರೀತಿಯಲ್ಲಿ ಮರುಹಂಚಿಕೊಳ್ಳುವಂತೆ ಪ್ರಧಾನ ಮಂತ್ರಿ ಜನರನ್ನು ಒತ್ತಾಯಿಸಿದ್ದಾರೆ.
ವಿಡಿಯೊಗಳನ್ನು ಪೋಸ್ಟ್ ಮಾಡುವಾಗ ‘#MyParliamentMyPride’ ಅನ್ನು ಬಳಸುವಂತೆ ಅವರು ಹೇಳಿದ್ದಾರೆ. ನೂತನ ಸಂಸತ್ ಭವನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರಲಿದೆ. ಈ ವಿಡಿಯೊ ಈ ಸಾಂಪ್ರದಾಯಿಕ ಕಟ್ಟಡದ ಒಂದು ನೋಟವನ್ನು ನೀಡುತ್ತದೆ. ನಾನು ವಿಶೇಷ ವಿನಂತಿಯೊಂದನ್ನು ಮಾಡುತ್ತಿದ್ದೇನೆ. ಈ ವಿಡಿಯೊವನ್ನು ನಿಮ್ಮ ಸ್ವಂತ ಧ್ವನಿಯೊಂದಿಗೆ ಹಂಚಿಕೊಳ್ಳಿ, ಅದು ನಿಮ್ಮ ಆಲೋಚನೆಗಳನ್ನು ತಿಳಿಸುತ್ತದೆ. ಅವುಗಳಲ್ಲಿ ಕೆಲವನ್ನು ನಾನು ಮರು ಟ್ವೀಟ್ ಮಾಡುತ್ತೇನೆ. #MyParliamentMyPride ಬಳಸಲು ಮರೆಯಬೇಡಿ ಎಂದು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.