NewDelhi: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆ (Cabinet Expansion) ಕಸರತ್ತು ಮುಗಿದಿದ್ದು, ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೈಕಮಾಂಡ್ ನಾಯಕರ ಜೊತೆಗೆ ಸರಣಿ ಸಭೆ ನಡೆಸಿ ಅಂತಿಮವಾಗಿ ಪಟ್ಟಿ ಸಿದ್ಧಪಡಿಸಿದ್ದಾರೆ.
ಹೊಸ ಸರ್ಕಾರಕ್ಕೆ ಶುಭಾಶಯ ಕೋರಿದ ಸೋನಿಯಾಗಾಂಧಿ ಉತ್ತಮ ಆಡಳಿತ ನೀಡುವಂತೆ ಸೂಚಿಸಿದ್ದಾರೆ. ಳಿಕ 23 ಹೆಸರುಗಳನ್ನು ಅಂತಿಮಗೊಳಿಸಿದ್ದು ನಾಳೆ ಬೆಳಗ್ಗೆ 11:45 ಕ್ಕೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 23 ಜನರಿಗೆ ಈಗಾಗಲೇ ದೂರವಾಣಿ ಕರೆ ಮೂಲಕ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವವರು: ಶಿವಾನಂದ ಪಾಟೀಲ್ – ಲಿಂಗಾಯತ ( ಬಸವನಬಾಗೇವಾಡಿ), ಎಸ್‍ಎಸ್ ಮಲ್ಲಿಕಾರ್ಜುನ್- ಲಿಂಗಾಯತ (ದಾವಣಗೆರೆ ಉತ್ತರ), ಹೆಚ್.ಕೆ.ಪಾಟೀಲ್ – ರೆಡ್ಡಿ ಲಿಂಗಾಯತ (ಗದಗ), ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ – ಒಕ್ಕಲಿಗ (ಬ್ಯಾಟರಾಯನಪುರ), ಚಲುವರಾಯ ಸ್ವಾಮಿ -ಒಕ್ಕಲಿಗ (ನಾಗಮಂಗಲ), ಕೆ. ವೆಂಕಟೇಶ್- ಒಕ್ಕಲಿಗ (ಪಿರಿಯಾಪಟ್ಟಣ), ಎಚ್.ಸಿ ಮಹದೇವಪ್ಪ – ಎಸ್‍ಸಿ -ಬಲಗೈ (ಟಿ.ನರಸೀಪುರ), ಈಶ್ವರ್ ಖಂಡ್ರೆ – ಲಿಂಗಾಯತ (ಭಾಲ್ಕಿ), ಕೆ.ಎನ್ ರಾಜಣ್ಣ- ಎಸ್‍ಟಿ (ಮಧುಗಿರಿ), ಶರಣ ಬಸಪ್ಪ ದರ್ಶನಾಪೂರ್, ಆರ್. ಬಿ ತಿಮ್ಮಾಪೂರ್, ಶಿವರಾಜ್ ತಂಗಡಗಿ, ಶರಣ ಪ್ರಕಾಶ್ ಪಾಟೀಲ್- ಲಿಂಗಾಯತ (ಸೇಡಂ), ಮಂಕಾಳ ವೈದ್ಯ – ಮೊಗವೀರ ( ಭಟ್ಕಳ), ಲಕ್ಷ್ಮಿ ಹೆಬ್ಬಾಳ್ಕರ್- ಲಿಂಗಾಯತ (ಬೆಳಗಾವಿ ಗ್ರಾ.), ರಹೀಂ ಖಾನ್ – ಮುಸ್ಲಿಂ (ಬೀದರ್ ಉತ್ತರ), ಎಂ.ಸಿ ಸುಧಾಕರ್ – ಒಕ್ಕಲಿಗ (ಚಿಂತಾಮಣಿ), ಡಿ ಸುಧಾಕರ್, ಸಂತೋಷ್ ಲಾಡ್ -ಮರಾಠ (ಕಲಘಟಗಿ), ಬೋಸರಾಜು – ಕ್ಷತ್ರೀಯ (ಮಾಜಿ ಎಂಎಲ್‍ಸಿ), ಬೈರತಿ ಸುರೇಶ್ – ಕುರುಬ (ಹೆಬ್ಬಾಳ), ಮಧು ಬಂಗಾರಪ್ಪ- ಈಡಿಗ (ಸೊರಬ) ಹಾಗೂ ಬಿ. ನಾಗೇಂದ್ರ.