ಇಂದು ಸಿಎಂ ಸಿದ್ದರಾಮಯ್ಯ ಸಂಪುಟಕ್ಕೆ ಭರ್ಜರಿ ಸರ್ಜರಿಯಾಗಿದ್ದು, 24 ಜನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಂತೆಯೇ ಇತ್ತೀಚೆಗೆ ಕಾಂಗ್ರೆಸ್ ಸೇರಿ ಪಕ್ಷದ ಪರ ಪ್ರಚಾರ ಮಾಡಿದ್ದ ಗೀತಾ ಶಿವರಾಜ್ ಕುಮಾರ್ ತಮ್ಮ ಸಹೋದರ ಸೇರಿದಂತೆ ಹಲವು ನಾಯಕರ ಪರ ಪ್ರಚಾರ ಮಾಡಿದ್ದರು. ಈ ಸಂದರ್ಭದಲ್ಲಿ ಸಹೋದರ ಸಚಿವ ಆಗುವುದು ಗ್ಯಾರಂಟಿ ಎಂದು ಹೇಳಿದ್ದರು. ಸದ್ಯ ಅವರ ಸಹೋದರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜಭವನದ ಗಾಜಿನ ಮನೆಗೆ ನಟ ಶಿವರಾಜ್ ಕುಮಾರ್ ಆಗಮಿಸಿದ್ದರು. ಶಿವರಾಜ್ ಕುಮಾರ್ (Shivaraj Kumar) ಪತ್ನಿ ಗೀತಾ ಅವರ ಸಹೋದರ ಮಧು ಬಂಗಾರಪ್ಪ ಕೂಡ ಒಬ್ಬರು. ಮಧು ಪ್ರಮಾಣವಚನ (Pramanavachan) ಕಾರ್ಯಕ್ರಮದಲ್ಲಿ ಭಾಗವಹಿಸಲು ನಟ ಶಿವರಾಜ್ ಕುಮಾರ್ ಕೂಡ ಆಗಮಿಸಿದ್ದಾರೆ.
ಮಧು ಬಂಗಾರಪ್ಪ (Madhu Bangarappa) ಸಚಿವರಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಬಹಳ ಹಾರ್ಡ್ ವರ್ಕರ್. ಒಳ್ಳೆಯ ಮನುಷ್ಯ. ಅಂತವರಿಗೆ ಸಚಿವ ಸ್ಥಾನ ಸಿಕ್ಕಾಗ ಜನರಿಗೆ ಒಳ್ಳೆಯದಾಗಲಿದೆ ಎನ್ನುವ ಭಾವನೆ ನನ್ನದು. ಮಧು ನನಗೆ 37 ವರ್ಷದಿಂದ ಸ್ನೇಹಿತ. ಅವರು ಅಧಿಕಾರದಲ್ಲಿ ಇರದಿದ್ದಾಗಲೂ ಸಾಕಷ್ಟು ಕೆಲಸ ಮಾಡಿದ್ದಾರೆ.ಮುಂದುವರೆದು ಮಾತನಾಡಿದ ಅವರು, ಸಿಎಂ ಸಿದ್ಧರಾಮಯ್ಯನವರ (Siddaramaiah) ಕುರಿತೂ ಮೆಚ್ಚುಗೆಯ ಮಾತುಗಳನ್ನು ಆಡಿದರು. ‘ಸಿದ್ದರಾಮಯ್ಯ ಅವರೆಲ್ಲ ದೊಡ್ಡ ರಾಜಕಾರಣಿ. ಅವರು ನನ್ನನ್ನ ಪ್ರೀತಿಯಿಂದ ಕ್ಯಾಂಪೇನಿಂಗ್ ಗೆ ಕರೆದಿದ್ದರು, ನಾನು ಅಷ್ಟೇ ಪ್ರೀತಿಯಿಂದ ಹೋಗಿದ್ದೆ.