ಜೈಪುರ: ರಾಜಸ್ಥಾನದಲ್ಲಿ (Rajasthan) ಕಳೆದ ಎರಡು ವಾರಗಳಿಂದ ಭರ್ಜರಿಯಾಗಿ ಮಳೆ (Rain) ಹಾಗೂ ಚಂಡಮಾರುತದ (Thunderstorms) ಬೀಸಿದ್ದು, ಇಲ್ಲಿಯವರೆಗೆ 13 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಪೂರ್ವ ರಾಜಸ್ಥಾನದ ಪ್ರತ್ಯೇಕ ಸ್ಥಳಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, ರಾಜ್ಯದ ವಿವಿಧೆಡೆ ಗುಡುಗು ಸಹಿತ ಬಿರುಗಾಳಿ ಬೀಸಿದೆ. ಕೇವಲ ಎರಡು ದಿನಗಳಲ್ಲಿ 13 ಜನ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ಅಲ್ಲಿಯ ಟೋಂಕ್ ನಲ್ಲಯೇ 10 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಭಿಲ್ವಾರದ ಮಂಡಲ್‌ನಲ್ಲಿ 11 ಸೆಂ.ಮೀ ಮಳೆಯಾಗಿದ್ದು, ಹನುಮಾನ್‌ಗಢದ ರಾವತ್ಸರ್‌ನಲ್ಲಿ 6 ಸೆಂ.ಮೀ ಮಳೆ ದಾಖಲಾಗಿದೆ. ಅಷ್ಟೇ ಅಲ್ಲದೇ ಉಳಿದ ಪ್ರದೇಶಗಳಲ್ಲಿ ಸರಾಸರಿ 3 ಸೆಂ.ಮೀ ಮಳೆಯಾಗಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಮಳೆಯಾಗಲಿದೆ ಎದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.