ಪ್ರೀತಿಸಿ ಮದುವೆಯಾಗಲು(Marriage) ನಿರಾಕರಿಸಿದ್ದಕ್ಕೆ ಯುವತಿ ತನ್ನ ಪ್ರಿಯತಮನ (Lover) ಮೇಲೆ ಬಿಸಿ ನೀರು ಎರಚಿರುವ ಘಟನೆ ಬೆಂಗಳೂರಿನ(Bengaluru) ಚಾಮರಾಜಪೇಟೆಯಲ್ಲಿ ಬೆಳಕಿಗೆ ಬಂದಿದೆ.
ಮೂಲತಃ ಕಲಬುರಗಿ ಜಿಲ್ಲೆಯ ವಿಜಯಶಂಕರ ಆರ್ಯ ಹಾಗೂ ಅಫ್ಜಲ್ಪುರದ ದೇಸಾಯಿ ಕಲ್ಲೂರಿನ ಜ್ಯೋತಿ ದೊಡ್ಡಮನಿ ಮಧ್ಯೆ ಪರಿಚಯವಾಗಿ ಪ್ರೀತಿಸಿದ್ದಾರೆ. ಸದ್ಯ ವಿಜಯ್ ಜ್ಯೀತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಕುಪಿತಗೊಂಡ ಜ್ಯೋತಿ ನಿನ್ನ ಹತ್ತಿರ ಮಾತನಾಡಬೇಕು ಬಾ ಎಂದು ರೂಮಿಗೆ ಕರೆಯಿಸಿಕೊಂಡು ಬಿಸಿ ನೀರು ಎರಚಿದ್ದಾಳೆ. ಇದರಿಂದ ಪ್ರಿಯಕರ ವಿಜಯಶಂಕರಗೆ ಗಂಭಿರ ಗಾಯಗೊಂಡಿದ್ದಾನೆ ಎನ್ನಲಾಗಿದೆ.
ಯುವಕ ಬೋರೋ ಕ್ಲಾಥಿಂಗ್ನಲ್ಲಿ ಫೋಟೋ ಎಡಿಟಿಂಗ್ ಕೆಲಸ ಮಾಡಿಕೊಂಡಿದ್ದ ವಿಜಯ್, ತನ್ನ ಬಾಡಿಗೆ ರೂಂನ್ನು ಜ್ಯೋತಿಗೆ ಬಿಟ್ಟು ಕೊಟ್ಟು, ತನ್ನ ಸ್ನೇಹಿತನ ಜೊತೆ ಬೊಮ್ಮಸಂದ್ರದ ಹೆರಾಂಡಳ್ಳಿಯಲ್ಲಿ ವಾಸವಾಗಿದ್ದ. ಜ್ಯೋತಿ ಬೃಂದಾವನ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಳು.ಆದರೆ, ಜ್ಯೋತಿಗೆ ಈ ಹಿಂದೆಯೂ ಮದುವೆಯಾಗಿತ್ತು. ಈ ವಿಷಯವನ್ನು ಮಾತ್ರ ಮುಚ್ಚಿಟ್ಟು ಆತನೊಂದಿಗೆ ಪ್ರೀತಿಸುತ್ತಿದ್ದಾರೆ. ಈ ವಿಷಯ ಗೊತ್ತಾಗುತ್ತಿದ್ದಂತೆ ವಿಜಯ್, ಜ್ಯೋತಿಯನ್ನು ದೂರ ಮಾಡಲು ಆರಂಭಿಸಿದ್ದಾನೆ.
ಮೇ 5ರಂದು ಮಾತನಾಡಬೇಕು ಬಾ ಎಂದು ಜ್ಯೋತಿ ಮನೆಗೆ ಕರೆಯಿಸಿಕೊಂಡಿದ್ದಾಳೆ. ನಮ್ಮಬ್ಬರಿಗೂ ಮದುವೆಯಾಗಿದೆ. ಇನ್ನು ಮುಂದೆ ಇದೆಲ್ಲಾ ಬೇಡ. ಇಲ್ಲಿಗೆ ನಿಲ್ಲಿಸೋಣ ಎಂದು ವಿಜಯ್, ಜ್ಯೋತಿಗೆ ಹೇಳಿದ್ದಾನೆ. ಇದರಿಂದ ಜ್ಯೋತಿ ಆಕ್ರೋಶಗೊಂಡಿದ್ದಳು. ಆದರೂ ಸುಮ್ಮನಿದ್ದಳು. ನಂತರ ವಿಜಯ್ ಯಾಕೋ ಮೈಗೆ ಹುಷಾರಿಲ್ಲ ಡ್ರಿಪ್ಸ್ ಹಾಕು ಎಂದು ಹೇಳಿ ರೂಮಿನಲ್ಲಿ ಹೋಗಿ ಮಲಗಿಕೊಂಡಿದ್ದ. ಜ್ಯೋತಿಯು ಸಹ ವಿಜಯ್ಗೆ ಡ್ರಿಪ್ಸ್ ಹಾಕಿದ್ದಾಳೆ. ನಂತರ ಮೇ 26ರ ಬೆಳಗಿನ ಜಾವ 4 ರಿಂದ 5 ಗಂಟೆಗೆ ಬಿಸಿ ನೀರು ಎರಚಿದ್ದಾಳೆ ಎನ್ನಲಾಗಿದೆ.