Kornersite

Crime Just In Karnataka State

Husband Murder: ಪ್ರಿಯಕರನೊಂದಿಗೆ ಪತಿಯ ಕೊಲೆ ಮಾಡಿದ ಪತ್ನಿ!

Kolar: ಪ್ರಿಯಕರ(Lover)ನೊಂದಿಗೆ ಸೇರಿ ಪತ್ನಿ(Wife)ಯೇ ಪತಿ(Husband)ಯನ್ನ ಕೊಲೆ(Murder) ಮಾಡಿರುವಂತಹ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕಿನ ಜನ್ನಘಟ್ಟ ಗ್ರಾಮದ ಜಾನಪದ ಕಲಾವಿದ ಕೃಷ್ಣಮೂರ್ತಿ ಎಂಬಾತ ಕೊಲೆಯಾಗಿದ್ದು, ಪತ್ನಿ ಸೌಮ್ಯ ಹಾಗೂ ಪ್ರಿಯಕರ ಶ್ರೀಧರ್ ಸೇರಿದಂತೆ ಕೊಲೆಗೆ ಸಹಾಯ ಮಾಡಿದ ಮತ್ತೋರ್ವ ಶ್ರೀಧರ್ ಎಂಬಾತನನ್ನ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆ ರಾತ್ರಿ ತಾಲೂಕಿನ ಜನ್ನಘಟ್ಟ ರೈಲ್ವೆ ಬ್ರಿಡ್ಕ್ ಬಳಿ ಬೈಕ್ ನಿಂದ ಬಿದ್ದು ಜಾನಪದ ಕಲಾವಿದ ಕೃಷ್ಣಮೂರ್ತಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿತ್ತು. ಆದರೆ ಕೃಷ್ಣಮೂರ್ತಿ ತಲೆಗೆ ಬಿದ್ದಿದ್ದ ಗಾಯ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ನಂತರ ಪತ್ನಿಯೇ ಪ್ರಿಯಕರನಿಂದ ಕೊಲೆ ಮಾಡಿಸಿದ್ದಾಳೆ ಎನ್ನುವುದು ಬೆಳಕಿಗೆ ಬಂದಿದೆ.

ಕಳೆದ ಹಲವು ವರ್ಷಗಳಿಂದ ಕೃಷ್ಣಮೂರ್ತಿ ಸಂಸಾರದಲ್ಲಿ ಬಿರುಕು ಮೂಡಿತ್ತು. ಪತ್ನಿ ಸೌಮ್ಯ ಮಾವನ ಮಗನಾದ ಶ್ರೀಧರ್ ನೊಂದಿಗೆ ಸಂಭಂದ ಹೊಂದಿದ್ದಳು ಎನ್ನಲಾಗಿತ್ತು. ಈ ವಿಚಾರವಾಗಿ ಕೃಷ್ಣಮೂರ್ತಿ ಹಾಗೂ ಪತ್ನಿ ಸೌಮ್ಯ ನಡುವೆ ಜಗಳ ಆಗುತ್ತಿದ್ದು, ಹಿರಿಯರ ಸಮ್ಮುಖದಲ್ಲಿ‌ ನ್ಯಾಯಪಂಚಾಯ್ತಿ ಆಗಿತ್ತು. ಅದಾಗ್ಯೂ ಬಗೆಹರಿಯದ ಹಿನ್ನಲೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನ ಕೊಲೆ ಮಾಡುವ ಖತರ್ನಾಕ್ ಕೆಲಸಕ್ಕೆ ಪತ್ನಿ ಸೌಮ್ಯ ಪ್ಲಾನ್ ಮಾಡಿದ್ರು. ಅದರಂತೆ ನಿನ್ನೆ ರಾತ್ರಿ 8 ಗಂಟೆ ಸಮಯದಲ್ಲಿ ಕೋಲಾರದಿಂದ ಮನೆಗೆ ತೆರಳುತ್ತಿದ್ದ ಕೃಷ್ಣಮೂರ್ತಿಯನ್ನ, ಜನ್ನಘಟ್ಟ ರೈಲ್ವೆ ಬ್ರಿಡ್ಜ್ ಬಳಿ ಡ್ರಾಪ್ ಕೇಳುವ ನೆಪದಲ್ಲಿ ಬೈಕ್ ನಿಲ್ಲಿಸಿದ ಪ್ರಿಯಕರ ಶ್ರೀಧರ್ ಹಾಗೂ ಆತನ ಸ್ನೇಹಿತ ಶ್ರೀಧರ್, ಕೃಷ್ಣಮೂರ್ತಿ ನಿಲ್ಲಿಸಿದ ಕೂಡಲೇ ರಾಡ್ ನಿಂದ ತಲೆಯ ಹಿಂಬಾಗಕ್ಕೆ ಹೊಡೆದಿದ್ದಾರೆ. ನಂತರ ಸ್ಥಳದಿಂದ ಪರಾರಿಯಾಗಿದ್ದು, ಕೃಷ್ಣಮೂರ್ತಿ ರಕ್ತದ ಮಡುವಿನಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಜೊತೆಗೆ ಪತ್ನಿ ಸೌಮ್ಯ ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದಾಳೆ.

ಪತ್ನಿ ಸೌಮ್ಯ, ಪ್ರಿಯಕರ ಶ್ರೀಧರ್ ಹಾಗೂ ಅತನ ಸ್ನೇಹಿತ ಶ್ರೀಧರ್ ಮೂವರನ್ನ ವಶಕ್ಕೆ ಪಡೆದಿರುವ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ