Kornersite

Entertainment Just In Sandalwood

ಬಾ ಬಾರೋ…ಬಾರೋ ರಣಧೀರ…ಕ್ರೇಜಿಸ್ಟಾರ್ ಮನೆ ಮುಂದೆ ಹಾಡುತ್ತಿರುವ ಅಭಿಮಾನಿಗಳು! ಏಕೆ?

ಹಿರಿಯ ನಟ ರವಿಚಂದ್ರನ್ ಈ ವರ್ಷ ಹುಟ್ಟು ಹಬ್ಬ ಆಚರಣೆಯಿಂದ ದೂರ ಉಳಿಯಲು ನಿರ್ಧಾರಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಅವರ ಮನೆಯ ಮುಂದೆ ಗಲಾಟೆ ನಡೆಸಿದ್ದಾರೆ.

ಮನೆ ಬಳಿ ಅಭಿಮಾನಿಗಳು ಬಂದರೂ ರವಿಚಂದ್ರನ್ ಭೇಟಿಯಾಗಿಲ್ಲ. ಜಡ್ಜ್ಮೆಂಟ್ ಶೂಟಿಂಗ್ನಲ್ಲಿ ಬ್ಯುಸಿಯಿರುವ ರವಿಚಂದ್ರನ್, ಜನ್ಮದಿನ ಎಂದು ಮನೆಯಲ್ಲಿಯೇ ಇದ್ದಾರೆ. ಆದರೆ, ಹುಟ್ಟು ಹಬ್ಬ ಇರುವ ಹಿನ್ನೆಲೆಯಲ್ಲಿ ರವಿಚಂದ್ರನ್ ನೋಡಲು ಅಭಿಮಾನಿಗಳು ಮನೆಯ ಹತ್ತಿರ ಜಮಾಯಿಸಿದ್ದಾರೆ.

ಆದರೆ, ಈ ಬಾರಿ ನಾನು ಹುಟ್ಟುಹಬ್ಬ ಆಚರಿಸುವುದಿಲ್ಲ ಎಂದು ರವಿಚಂದ್ರನ್ ಹೊರಗೆ ಬರುತ್ತಿಲ್ಲ. ಏಕೆ ಬರ್ತ್ ಡೇ ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಾವೆಲ್ಲಾ ದೂರದ ಊರುಗಳಿಂದ ಬಂದಿದ್ದೀವಿ. ಅವರ ಬರ್ತ್ ಡೇ ಆಚರಿಸಲು ಬಂದಿದ್ದೇವೆ ಆದ್ರೆ ಯಾಕೆ ಬರ್ತಡೇ ಆಚರಿಸಲ್ಲ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

ರವಿಚಂದ್ರನ್ ಮನೆಯಿಂದ ಹೊರಬಂದು ದರ್ಶನ ನೀಡುವವರೆಗೂ ನಾವು ಹೋಗಲ್ಲ ಅಂತ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ರವಿಚಂದ್ರನ್ ನೋಡಲು ರಾಣಿಬೆನ್ನೂರುನಿಂದ ಇಡೀ ಕುಟುಂಬವೇ ಆಗಮಿಸಿದೆ. ಒಂದೇ ಕುಟುಂಬದ 16 ಮಂದಿ ನಿನ್ನೆಯೇ ಬೆಂಗಳೂರಿಗೆ ಬಂದಿದ್ದಾರೆ. 11 ಜನ ಮಹಿಳೆಯರು ಹಾಗೂ ಮಕ್ಕಳು ಕೂಡ ಬಂದಿದ್ದಾರೆ. ನಮ್ಮ ಮೇಲೆ ನಿಮಗೆ ಅಭಿಮಾನ ಇದ್ದರೆ ನೀವು ಇವತ್ತು ಹೊರಗೆ ಬಂದು ನಮಗೆ ದರ್ಶನ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಅಭಿಮಾನಿಗಳಾದ ನಾವು ನಿಮ್ಮಂತೆಯೇ ಹಠವಾದಿಗಳು ಎಂದ ರಣಧೀರ ಚಿತ್ರದ ಬಾ ಬಾರೋ ಬಾರೋ ರಣಧೀರ ಹಾಡನ್ನು ಹಾಡಿ ಅವರನ್ನು ಕರೆಯುತ್ತಿದ್ದಾರೆ.

You may also like

Entertainment Gossip Mix Masala

ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಲು ಹಣದ ಹೊಳೆಯನ್ನೇ ಹರಿಸಿರುವ ರಾಜಮೌಳಿ ಹಾಗೂ ತಂಡ

ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಶ್ರಮದಿಂದಾಗಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ ಬರುವಂತಾಗಿದೆ. ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ,
Entertainment Politics

ರಾಜ್ಯ ರಾಜಕಾರಣಕ್ಕೆ ನಟಿ ರಮ್ಯಾ! ಬೆಂಗಳೂರಿನಿಂದ ಸ್ಪರ್ಧೆ?

ಬೆಂಗಳೂರು : ಕೆಲವು ಸಮಯದವರೆಗೆ ಚಿತ್ರರಂಗ ಹಾಗೂ ರಾಜಕಾರಣದಿಂದ ದೂರ ಇದ್ದ ನಟಿ ರಮ್ಯ, ಈಗ ಎರಡೂ ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದಾರೆ. ಈಗಾಗಲೇ ಚಿತ್ರರಂಗದಲ್ಲಿ ಬ್ಯೂಸಿಯಾಗಿರುವ ಅವರು, ರಾಜಕೀಯದಲ್ಲಿಯೂ