ಬೆಂಗಳೂರು : ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ (Gold and Silver Prices) ಇಳಿಕೆಯ ಹಾದಿ ಮುಂದುವರೆದಿದೆ. ವಿದೇಶಗಳ ಚಿನಿವಾರ ಪೇಟೆಗಳ ಪೈಕಿ ಕತಾರ್, ಓಮನ್ ಹೊರತುಡಿಸಿ ಉಳಿದ ಕಡೆ ಬಹುತೇಕ ಯಥಾಸ್ಥಿತಿಯಲ್ಲಿ ಬೆಲೆಗಳಿವೆ.
ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 55,450 ರೂ. ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,490 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 7,260 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55,500 ರೂ. ಇದೆ. ಬೆಳ್ಳಿ ಬೆಲೆ 100 ಗ್ರಾಂಗೆ 7,650 ರೂ. ಇದೆ.
ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆಮಾಡಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎನಿಸಿದೆ.
ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 31ಕ್ಕೆ):
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,450 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,490 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 726 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,500 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,530 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 765 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಮಲೇಷ್ಯಾ: 2,850 ರಿಂಗಿಟ್ (51,183 ರುಪಾಯಿ)
ದುಬೈ: 2182.50 ಡಿರಾಮ್ (49,089 ರುಪಾಯಿ)
ಅಮೆರಿಕ: 595 ಡಾಲರ್ (49,146 ರುಪಾಯಿ)
ಸಿಂಗಾಪುರ: 818 ಸಿಂಗಾಪುರ್ ಡಾಲರ್ (49,928 ರುಪಾಯಿ)
ಕತಾರ್: 2,260 ಕತಾರಿ ರಿಯಾಲ್ (51,318 ರೂ)
ಓಮನ್: 240 ಒಮಾನಿ ರಿಯಾಲ್ (51,574 ರುಪಾಯಿ)
ಕುವೇತ್: 187 ಕುವೇತಿ ದಿನಾರ್ (50,212 ರುಪಾಯಿ)