ಚಿಕ್ಕಬಳ್ಳಾಪುರ : ಹೆಂಡತಿಯ ಅಕ್ರಮ ಸಂಬಂಧ ಹಿನ್ನಲೆಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತಿ ಮಚ್ಚಿನಿಂದ ಕೊಲೆ ಮಾಡಿರುವ ಘಟನೆ ಚಿಂತಾಮಣಿ ತಾಲೂಕು ಮುರಗಮಲ್ಲದ ಎಂ.ಗೊಲ್ಲಪಲ್ಲಿ ಗ್ರಾಪಂ ವ್ಯಾಪ್ತಿಯ ಕೊಂಡ್ಲಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವಿನೋದಮ್ಮ ಕೊಲೆಯಾದ ಮಹಿಳೆ. ಪತಿ ಕೆ.ಎಸ್. ಸುರೇಶ್ ಕೊಲೆ ಮಾಡಿದ ಆರೋಪಿ. ಈ ಇಬ್ಬರೂ ಕಳೆದ 16 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ 14 ವರ್ಷದ ಮಗಳು ಕೂಡ ಇದ್ದಾಳೆ. ಹತ್ತು ವರ್ಷಗಳಿಂದ ಸುಖ ಸಂಸಾರ ನಡೆಸುತ್ತಿದ್ದ ಈ ದಂಪತಿಯ ಮಧ್ಯೆ ಜಗಳ ಹೆಚ್ಚಾಗಿತ್ತು.
ಇತ್ತೀಚೆಗೆ ಸುರೇಶ್ ಹೆಂಡತಿಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪಿಡಿಸುತ್ತಿದ್ದ ಎಂಬ ಆರೋಪವನ್ನು ವಿನೋದಮ್ಮಳ ಕುಟುಂಬಸ್ಥರು ಮಾಡಿದ್ದಾರೆ. ಹೆಂಡತಿ ಬೇರೆಯವರೊಂದಿಗೆ ಆಕ್ರಮ ಸಂಬಂಧ ಹೊಂದಿದ್ದಳು ಎಂಬ ಅನುಮಾನದ ಮೇಲೆ ವಿನೋದಮ್ಮಳನ್ನು ಮಚ್ಚಿನಿಂದ ಕುತ್ತಿಗೆ ಸೀಳಿ ಕೊಚ್ಚಿ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಸುರೇಶ್ ಹೇಳಿದ್ದಾನೆ. ಸ್ಥಳಕ್ಕೆ ಚಿಂತಾಮಣಿ ಉಪ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ, ಕೆಂಚಾರ್ಲಹಳ್ಳಿ ವೃತ್ತದ ಆರಕ್ಷಕ ವೃತ್ತ ನಿರೀಕ್ಷಕ ಪುರುಷೋತ್ತಮ್, ಬಟ್ಲಹಳ್ಳಿ ಪಿಎಸ್ಐ ಪುನೀತ್ ಹಾಗೂ ಬಟ್ಲಹಳ್ಳಿ ಪೊಲಿಸರು ಭೇಟಿ ನೀಡಿ ಸ್ಥಳ ಪರೀಶಿಲನೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದಾರೆ.