ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ದೇಶದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಅವರು ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಟಿಸಿ ಬಹುಬೇಡಿಕೆ ಪಡೆದಿದ್ದಾರೆ.
ರಶ್ಮಿಕಾ ಇಷ್ಟೊಂದು ಪ್ರಸಿದ್ಧಿಯಾಗಿದ್ದರೂ ಅವರಿಗೆ ಟ್ರೋಲ್ ಕಾಟ ನಿಂತಿಲ್ಲ. ಅವರು ನಡೆದುಕೊಳ್ಳುವ ಪ್ರತಿ ವಿಚಾರ ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತದೆ. ಅವರನ್ನು ಹಿಗ್ಗಾಮುಗ್ಗಾ ಟೀಕಿಸಲಾಗುತ್ತಿದೆ. ಈಗ ಅವುಗಳನ್ನು ಅವರು ಮೆಟ್ಟಿ ನಿಂತಿದ್ದಾರೆ. ಇದಕ್ಕೆ ಅವರ ಬಳಿ ಒಂದು ಮಂತ್ರ ಇದೆ. ಅದೇನು ಎಂಬುದನ್ನು ರಶ್ಮಿಕಾ ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ನಗುತ್ತಿರುವ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಕ್ಯಾಪ್ಶನ್ನಲ್ಲಿ ಅವರು ಗುಣ ಪಡಿಸಿಕೊಳ್ಳುವುದು, ಕಲಿಯುವುದು, ಬೆಳೆಯುವುದು ಮತ್ತು ಪ್ರೀತಿ ತೋರಿಸುವುದು. ಇದೇ ರಶ್ಮಿಕಾ ಅವರ ನಗುವಿನ ಹಿಂದಿನ ಮಂತ್ರ ಎಂದು ಅವರು ಬರೆದುಕೊಂಡಿದ್ದಾರೆ.