Kornersite

Crime Just In

ಮಗನನ್ನೇ ಕೊಲೆ ಮಾಡಿ ದೇಹ ಬೇಯಿಸಿ ತಿಂದ ತಾಯಿ!

ಪ್ರಪಂಚದಲ್ಲಿ ಕೆಟ್ಟ ತಂದೆ ಸಿಗಬಹುದು. ಆದರೆ, ಕೆಟ್ಟ ತಾಯಿ ಸಿಗುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ. ಆದರೆ, ಇದಕ್ಕೆ ವ್ಯತಿರಿಕ್ತವಾದಂತಹ ಘಟನೆಯೊಂದು ಬೆಳಕಿಗೆ ಬಂದಿದೆ.

ಹೆತ್ತ ತಾಯಿ ಕೂಡ ಕ್ರೂರಿಯಾಗಿ ಇಂದು ವರ್ತಿಸುತ್ತಾಳೆ. ಅದಕ್ಕೆ ಸಾಕ್ಷಿ ಎನ್ನುವಂತೆ ಹೆತ್ತ ತಾಯಿಯೇ ತನ್ನ ಐದು ವರ್ಷದ ಮಗನನ್ನು ಕೊಲೆ ಮಾಡಿ, ಬೇಯಿಸಿ ತಿಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಈಜಿಪ್ಟ್ ನ ಫಾಕೊಸ್ ಸೆಂಟರ್ ಬಳಿಯ ಹಳ್ಳಿಯೊಂದರಲ್ಲ ನಡೆದಿದೆ. ಹನಾ(29) ಹೆಸರಿನ ಮಹಿಳೆ ಮೂರು ವರ್ಷಗಳ ಹಿಂದೆ ಗಂಡನಿಂದ ದೂರವಾಗಿದ್ದು, ಹಳ್ಳಿಯಲ್ಲಿ 5 ವರ್ಷದ ಮಗನೊಂದಿಗೆ ಜೀವನ ನಡೆಸುತ್ತಿದ್ದಳು. ಆಕೆ ಇತ್ತೀಚೆಗೆ ತನ್ನ ಜತೆ ಇದ್ದ ಏಕೈಕ ಮಗನನ್ನು ಕೊಲೆ ಮಾಡಿದ್ದಾಳೆ. ನಂತರ ಮಗನ ದೇಹವನ್ನು ಬೇಯಿಸಿದ್ದಾಳೆ. ನಂತರ ಶವದ ತಲೆಯ ಭಾಗವನ್ನು ತಿಂದಿದ್ದಾಳೆ.

ಆದರೆ, ಇವಳು ಮಾನಸಿಕ ಅಸ್ವಸ್ಥಳು ಎಂಬುವುದು ತನಿಖೆಯಿಂದ ತಿಳಿದು ಬಂದಿದೆ. ಮಗನ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯ ಸಂಸ್ಕಾರ ನಡೆಸಲು ಸೂಚಿಸಲಾಗಿದೆ. ಈ ಸುದ್ದಿ ಕೇಳಿದ ಜನರು ಬೆಚ್ಚಿ ಬಿದ್ದಿದ್ದಾರೆ. ಪೊಲೀಸರು ಆಕೆಯ ಮನೆಗೆ ಹೋಗಿ ಪರಿಶೀಲನೆ ಮಾಡಿದಾಗ ಮಗನ ದೇಹವನ್ನು ಬಕೆಟ್ ಒಂದರಲ್ಲಿ ತುಂಬಿಟ್ಟಿರುವುದು ಕಂಡು ಬಂದಿದೆ. ತಲೆ ಭಾಗವನ್ನು ತಿಂದರೆ ಮಗ ಶಾಶ್ವತವಾಗಿ ತನ್ನೊಂದಿಗೇ ಇರುತ್ತಾನೆ ಎಂದು ಭಾವಿಸಿ ಆಕೆ ಆ ರೀತಿಯಲ್ಲಿ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ