ಅಫ್ಘಾನಿಸ್ತಾನದ ಶಾಲೆಯಲ್ಲಿ 80 ಜನ ವಿದ್ಯಾರ್ಥಿನಿಯರಿಗೆ ವಿಷಪ್ರಾಶನ ಮಾಡಿರುವ ಹಿನ್ನೆಲೆಯಲ್ಲಿ ಅವರೆಲ್ಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವರದಿಗಳಂತೆ, ಈ ವಿದ್ಯಾರ್ಥಿನಿಯರಿಗೆ ವಿಷ ಪ್ರಾಶನ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಉತ್ತರದ ಸರ್-ಎ-ಪುಲ್ ಪ್ರಾಂತ್ಯದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸಂಚರಕ್ ಜಿಲ್ಲೆಯಲ್ಲಿ 1 ರಿಂದ 6 ನೇ ತರಗತಿಯ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ ಎಂದು ಪ್ರಾಂತೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಮೊಹಮ್ಮದ್ ರಹಮಾನಿ ಹೇಳಿದ್ದಾರೆ. ನಸ್ವಾನ್-ಎ-ಕಬೋದ್ ಆಬ್ ಶಾಲೆಯಲ್ಲಿ 60 ಮತ್ತು ನಸ್ವಾನ್-ಎ-ಫೈಜಾಬಾದ್ ಶಾಲೆಯಲ್ಲಿ 17 ಮಕ್ಕಳು ವಿಷ ಸೇವಿಸಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಎಲ್ಲಾ ವಿದ್ಯಾರ್ಥಿನಿಯರ ಆರೋಗ್ಯ ಚೆನ್ನಾಗಿದೆ ಎಂದು ತಿಳಿಸಿದ್ದಾರೆ.
ಅವರ ಊಟದಲ್ಲಿ ಯಾರಾದರೂ ವಿಷ ಹಾಕಿದ್ದರೇ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. 2021ರ ಆಗಸ್ಟ್ ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ, ಅಫ್ಘಾನ್ ಮಹಿಳೆಯರ ಸ್ವಾತಂತ್ರ್ಯವನ್ನೇ ಗುರಿಯಾಗಿಸಿದ್ದಾರೆ. ಹೆಣ್ಣುಮಕ್ಕಳು 6 ನೇ ತರಗತಿಗಿಂತ ಹೆಚ್ಚು ಓದುವಂತಿಲ್ಲ, ಕೆಲಸ ಮಾಡುವಂತಿಲ್ಲ ಎನ್ನುವ ಹೊಸ ಕಾನೂನನ್ನು ಜಾರಿಗೆ ತರಲಾಗಿದೆ.