ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲ ರಾಜಕಾರಣಿ, ಸೆಲೆಬ್ರಿಟಿಗಳನ್ನು ಮಿಮಿಕ್ರಿ ಮಾಡಿ ಪ್ರಸಿದ್ಧವಾಗಿದ್ದ ಅವಧೇಶ ದುಬೆ, ರೈಲಿನಲ್ಲಿ ಅಕ್ರಮವಾಗಿ ಉಡುಗೊರೆ ವಸ್ತುಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ವಲ್ಸಾದ್ ನ ಪ್ರೊಟೆಕ್ಷನ್ ಪೋರ್ಸ್ ಪ್ರಕರಣ ದಾಖಲಿಸಿ, ಪರವಾನಿಗೆ ಮಾರಾಟ ಮಾಡಿದ್ದಕ್ಕೆ ಕೇಸ್ ದಾಖಲಿಸಲಾಗಿದೆ.
ವಲ್ಸಾದ್ ರೈಲ್ವೆ ಅಧಿಕಾರಿಗಳ ಮಹಿತೆಯಂತೆ, ರೈಲಿನಲ್ಲಿ ಅಕ್ರಮವಾಗಿ ಉಡುಗೊರೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ದುಬೆ ಅವರನ್ನು ಆಪಿಎಫ್ ಆಕ್ಟ್ ಸೆಕ್ಷನ್ 114ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಿಡುಗಡೆ ಮಾಡಲಾಗಿದೆ. 2019ರಲ್ಲಿ ಮೊಬೈಲ್ ರೈಲ್ವೇ ನ್ಯಾಯಾಲಯವು ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ಅಲ್ಲದೇ, ಪರವಾನಿಗೆ ಇಲ್ಲದೆ ರೈಲುಗಳಲ್ಲಿ ಸಾಮಾಗ್ರಿ ಮಾರಾಟ ಮಾಡುವುದು, ಉಪದ್ರವ ನೀಡುವುದು, ನಿಂದನೀಯ ಅಥವಾ ಅಶ್ಲೀಲ ಭಾಷೆ ಬಳಸುವುದು, ಇತರರಲ್ಲಿಕಾನೂನು ಬಾಹಿರ ಪ್ರವೇಶಕ್ಕಾಗಿ 10 ದಿನಗಳ ಸರಳ ಜೈಲು ಶಿಕ್ಷೆ ವಿಧಿಸಿತ್ತು. ಸದ್ಯ ಅದೇ ಕೆಲಸದ ಮೇಲೆ ಮತ್ತೊಮ್ಮೆ ಪ್ರಕರಣ ದಾಖಲಾಗಿದೆ.