Kornersite

Bengaluru Just In Karnataka National State

ದೇಶದಲ್ಲಿ ಹೆಚ್ಚಾದ ಬಿಪೋರ್ ಜಾಯ್ ಸೈಕ್ಲೋನ್ ಭೀತಿ; ತೀವ್ರ ಸ್ವರೂಪಕ್ಕೆ ತಿರುಗುವ ಸಾಧ್ಯತೆ!

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿದ ಪರಿಣಾಮ ನೈರುತ್ಯ ಮುಂಗಾರು ಮಾರುತಗಳು ಈ ಬಾರಿ ತಡವಾಗಿವೆ. ಈ ವಾಯುಭಾರ ಕುಸಿತವು ಚಂಡಮಾರುತದ ಸ್ವರೂಪಕ್ಕೆ ತಿರುಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಇದೇ ರೀತಿಯ ವಾಯುಭಾರ ಕುಸಿತ ಮುಂದುವರೆದರೆ ಅದು ಚಂಡಮಾರುತದ ರೂಪ ಪಡೆಯಲಿದ್ದು, ಈಗಾಗಲೇ ಈ ಚಂಡಮಾರುತಕ್ಕೆ ಬಿಪರ್‌ಜಾಯ್ ಎಂದು ಹೆಸರಿಡಲಾಗಿದೆ.

ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಈ ಚಂಡಮಾರುತವು ಉತ್ತರ ದಿಕ್ಕಿಗೆ ಚಲಿಸುವ ಸೂಚನೆ ನೀಡಿದೆ. ಈ ಮೂಲಕ ಭಾರತದ ಪಶ್ಚಿಮ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಗಳೂ ಇವೆ. ಗೋವಾ ಹಾಗೂ ಮುಂಬೈ ತೀರಕ್ಕೆ ಅಪ್ಪಳಿಸಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಈ ಚಂಡಮಾರುತ ಈಶಾನ್ಯ ದಿಕ್ಕಿಗೆ ತಿರುಗಿದರೆ ಒಮೆನ್ ಹಾಗೂ ಯೆಮನ್ ರಾಷ್ಟ್ರಗಳ ಕರಾವಳಿ ತಲುಪಲಿದೆ ಎನ್ನಲಾಗಿದೆ.

ಬಿಪರ್‌ಜಾಯ್ ಎಂದರೆ ಅಪಾಯ, ವಿನಾಶ ಹಾಗೂ ದುರಂತ ಎಂಬ ಅರ್ಥ ಸೂಚಿಸುತ್ತದೆ. ಅಂತಾರಾಷ್ಟ್ರೀಯ ಹವಾಮಾನ ಸಂಘಟನೆಯು ಉಷ್ಣ ವಲಯದಲ್ಲಿ ಏಳುವ ಚಂಡಮಾರುತಗಳಿಗೆ ಹೆಸರಿಡಲು ಅನುಸರಿಸುವ ಪದ್ದತಿ ಪ್ರಕಾರ ಈ ಹೆಸರನ್ನು ಇಡಲಾಗಿದೆ. ಉಷ್ಣ ವಲಯದ ಚಂಡಮಾರುತ ತಟ್ಟುವ ಆಯಾ ಪ್ರದೇಶಗಳ ದೇಶಗಳು ಸೂಚಿಸುವ ಹೆಸರನ್ನೇ ಚಂಡಮಾರುತಗಳಿಗೆ ಇಡುವ ಪದ್ದತಿ ನಡೆದುಕೊಂಡು ಬಂದಿದೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ