Bangalore: ಪ್ರತಿಷ್ಟಿತ ಹೊಟೆಲ್ ನಲ್ಲಿ ಉದ್ಯಮಿಗಳ ಮಕ್ಕಳ ನಡುವೆ ಗಲಾಟೆ ನಡೆದಿತುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಪ್ರತಿಷ್ತಿತ ಫೋರ್ ಸೀಸನ್(Four Season)ಹೊಟೆಲ್ ನಲ್ಲಿ ಉದ್ಯಮಿಗಳ ಮಕ್ಕಳು ಬೆಳಗಿನ ಜಾವ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ದರ್ಶನ್ ಹಾಗೂ ಆಗಮ್ ವೇದಾಂತ್ ದುಗಾರ್ ಎನ್ನುವವರ ಮಧ್ಯೆ ಗಲಾಟೆಯಾಗಿದ್ದು, ದರ್ಶನ್ ತಲೆಗೆ ಗಾಯವಾಗಿದೆ. ಸದ್ಯ ದರ್ಶನ್, ಆಸ್ಪತ್ರೆಯಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಘಟನೆ ನಡೆದಿದ್ದು, ಬೆಳಗಿನ ಜಾವ 2.30ರ ಸುಮಾರಿಗೆ. ಅಸಲಿಗೆ ಉದ್ಯಮಿ ವೈಷ್ಣವಿ ಬಿಲ್ಡರ್ಸ್ ಗೋವಿಂದರಾಜು ಅವರ ಪುತ್ರನೇ ದರ್ಶನ್. ವಿಎಆರ್ ಬಿಲ್ಡರ್ಸ್ ನ ಮಾಲೀಕ ಸಂಜಯ್ ದುಗಾರ್ ಅವರ ಪುತ್ರ ವೇದಾಂತ್ ದುಗಾರ್.
ಇಬ್ಬರೂ ಮದುವೆ ಸಮಾರಂಭಕ್ಕೆಂದು ಫೋರ್ ಸೀಸನ್ ಹೋಟೆಲ್ ಗೆ ಹೋಗಿದ್ದಾರೆ. ಇಬ್ಬರೂ ಸ್ನೇಹಿತರು. ಆದ್ರೆ ಕಳೆದ ಕೆಲವು ದಿನಗಳ ಹಿಂದೆ ರೆಸ್ಟೋರೆಂಟ್ ವೊಂದರಲ್ಲಿ ವೇದಾಂತ್ ನನ್ನು ಮಾತನಾಡಿಸದೇ ದರ್ಶನ್ ಹೊರಟು ಹೋಗಿದ್ದ. ಫೋರ್ ಸೀಸನ್ ನಲ್ಲಿ ಇಬ್ಬರೂ ಎದುರಾದಾಗ ಹಳೇ ವಿಚಾರ ತೆಗೆದು, ಎಲ್ಲರೂ ನನ್ನನ್ನು ಮಾತನಾಡಿಸುತ್ತಾರೆ. ನೀನ್ಯಾಕೆ ಮಾತನಾಡಿಸುವುದಿಲ್ಲ್ ಎಂದು ವೇದಾಂತ್ ಕೇಳಿದ್ದಾನೆ. ಆಗ ದರ್ಶನ್ ನನ್ನಿಷ್ಟ ಎಂದು ಹೇಳಿದ್ದೆ ತಡ ಮಾತಿಗೆ ಮಾತು ಬೆಳೆದು ಬೀಯರ್ ಬಾಟಲಿಯಿಂದ ಹಲ್ಲೆ ಮಾಡುವರೆಗೂ ಹೋಗಿದೆ ಇವರಿಬ್ಬರ ಜಗಳ.
ಇದೀಗ ಆರ್ ಟಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.