ಕೊಲಂಬಿಯಾ ದೇಶದ ಮುಗ್ದಾಲೆನಾ ಎನ್ನುವ ಮಹಿಳೆ ತನ್ನ ನಾಲ್ಕು ಪುಟ್ಟ ಮಕ್ಕಳ ಜೊತೆ ವಿಮಾನದಲ್ಲಿ ಹೋಗುತ್ತಿದ್ದಳು. ಅಸಲಿಗೆ ಆಕೆ ತನ್ನ ಗಂಡನನ್ನ ಭೇಟಿಯಾಗಲು ಹೋಗುತ್ತಿದ್ದಳು. ಆದರೆ ದಾರಿ ಮಧ್ಯೆ ವಿಮಾನ ಕ್ರ್ಯಾಶ್ ಆಗಿ ಅಮೆಜಾನ್ ಕಾಡಿನಲ್ಲಿ ಬಿದ್ದಿದೆ. ಈ ದುರಂತದಲ್ಲಿ ಪೈಲೆಟ್ ಹಾಗೂ ಮಕ್ಕಳ ತಾಯಿ ಇಬ್ಬರೂ ಸಾವನ್ನಪ್ಪಿದ್ದಾರೆ. ಉಳಿದಿರೊದು ಪುಟ್ಟ ಮಕ್ಕಳು ಮಾತ್ರ. ಮೊದಲನೇ ಮಗು 13 ವರ್ಷ, ಎರಡನೇ ಮಗು 8 ವರ್ಷ, ಮೂರನೇ ಮಗು 4 ವರ್ಷ ಹಾಗೂ ನಾಲ್ಕನೇ ಮಗು ಕೇವಲ 11 ತಿಂಗಳು.
ಈ ನಾಲ್ಕು ಮಕ್ಕಳು ದಟ್ಟ ಮಎಜಾನ್ ಕಾಡಿನಲ್ಲಿ ಬರೋಬ್ಬರು ನಾಲ್ವತ್ತು ದಿನ ಬದುಕುಳಿದಿದ್ದು ಆಶ್ಚರ್ಯವೇ. ಈ ಮಕ್ಕಳ ಹುಡುಕಾಟಕ್ಕೆ ನೂರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿತ್ತು. ವಿಮಾನ ಬಿದ್ದ ಸ್ಥಳದಲ್ಲಿ ಶೂ, ಮಗುವಿನ ಹಾಲಿನ ಬಾಟಲಿ, ಕೊಳೆತ ಬಾಳೆಹಣ್ಣು ಸಿಕ್ಕಿದ್ದವು.
ನಾಲ್ವತ್ತು ದಿನಗಳ ನಂತರ ನಾಲ್ಕೂ ಮಕ್ಕಳು ಸುರಕ್ಷಿತವಾಗಿ ದೊರಕಿರುವ ಫೋಟೋವನ್ನು ಕೊಲಂಬಿಯಾ ಸೇನೆ ಪ್ರಕಟಿಸಿದೆ. ವೈದ್ಯರು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಯಾಕೆಂದ್ರೆ ಈ ನಾಲ್ವತ್ತು ದಿನಗಳಲ್ಲಿ ಮಕ್ಕಳು ಏನು ತಿಂದರು..? ಹೇಗೆ ಇದ್ದರು..? ಅವರ ಮೇಲೆ ಮಾನಸಿಕ ಹಾಗೂ ದೈಹಿಕ ತೊಂದರೆ ಆಗಿದೆಯಾ ಎನ್ನುವುದರ ಬಗ್ಗೆ ಇದೀಗ ಕಾಳಜಿಯಿಂದ ಪರಿಶೀಲನೆ ಮಾಡುತ್ತಿದ್ದಾರೆ.