ರಾಯಚೂರು: ಜೆಸಿಬಿ(JCB) ಹರಿದ ಪರಿಣಾಮ ಮೂವರು ಸ್ಥಳದಲ್ಲಿಯೇ ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟ ಘಟನೆ ಜಲ್ಲೆಯ ದೇವದುರ್ಗ(Devadurga) ತಾಲೂಕಿನ ನಿಲವಂಜಿ ಗ್ರಾಮದ ಬಳಿ ನಡೆದಿದೆ.
ಛತ್ತೀಸ್ಗಢ ರಾಜ್ಯದ ವಿಷ್ಣು(26), ಶಿವರಾಮ್(28), ಬಲರಾಮ್(30) ಸಾವನ್ನಪ್ಪಿರುವ ದುರ್ದೈವಿಗಳು. ಜಮೀನಿನಲ್ಲಿ ಬೋರ್ ವೆಲ್ ಕೊರೆದು ಕಾಲುದಾರಿಯಲ್ಲಿಯೇ ರಾತ್ರಿ ಮೂವರು ಮಲಗಿದ್ದರು. ಈ ಸಂದರ್ಭದಲ್ಲಿ ಕಾಲುದಾರಿಯಲ್ಲಿ ಬಂದ ಜೆಸಿಬಿ, ಮೂವರ ಮೇಲೆಯೂ ಹರಿದು ಹೋಗಿದೆ. ಹೀಗಾಗಿ ಮೂವರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.