ನಾಲ್ಕು ಕೈ, ನಾಲ್ಕು ಕಾಲು ಮತ್ತು ನಾಲ್ಕು ಕಿವಿ ಹೊಂದಿರುವ ಹೆಣ್ಣು ಮಗುವೊಂದು ಬಿಹಾರದ ಸರನ್ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿತ್ತು. ಈ ಮಗವನ್ನು ಕಂಡ ಆಸ್ಪತ್ರೆಯ ಸಿಬ್ಬಂದಿಯೇ ಒಂದು ಕ್ಷಣ ಆಶ್ಚರ್ಯ ವ್ಯಕ್ತಪಡಿಸಿದ್ದರು. ಈ ಘಟನೆ ಜೂನ್ 12ರಂದು ನಡೆದಿದ್ದು, ನವಜಾತ ಶಿಶು ಹುಟ್ಟಿದ 20 ನಿಮಿಷಗಳಲ್ಲಿಯೇ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ಪ್ರಿಯಾ ದೇವಿ ಎಂಬ ಮಹಿಳೆ ಈ ವಿಚಿತ್ರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಅಲ್ಲಿದ್ದ ಸಿಬ್ಬಂದಿಗಳು ಅಚ್ಚರಿಯಿಂದ ಬಂದು ಮಗು ನೋಡಿದ್ದಾರೆ. ಈ ಮಗುವನ್ನು ನೋಡುವುದಕ್ಕಾಗಿಯೇ ರಾತ್ರೋ ರಾತ್ರಿ ಆಸ್ಪತ್ರೆಯ ಎದುರು ಜನ ಸಾಗರವೇ ಹರಿದು ಬಂದಿತ್ತು.
ಆಸ್ಪತ್ರೆಯ ನಿರ್ದೇಶಕ ಡಾ.ಅನಿಲ್ ಕುಮಾರ್ ಪ್ರತಿಕ್ರಿಯಿಸಿದ್ದು, ಗರ್ಭಾಶಯದಲ್ಲಿ ಒಂದೇ ಅಂಡಾಶಯದಿಂದ ಎರಡು ಶಿಶುಗಳು ಹುಟ್ಟಿದಾಗ ಇಂತಹ ಮಕ್ಕಳು ಜನಿಸುತ್ತವೆ. ಈ ಕ್ರಿಯೆಯಲ್ಲಿ ಇಬ್ಬರು ಒಂದೇ ಸಮಯಕ್ಕೆ ಬೇರ್ಪಟ್ಟರೆ ಅವಳಿ ಮಕ್ಕಳು ಜನಿಸುತ್ತಾರೆ. ಹೆರಿಗೆಯ ಸಂದರ್ಭಲ್ಲಿ ಗರ್ಭಿಣಿಯರು ಇದರಿಂದ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ. ಸದ್ಯ ಶಸ್ತ್ರಚಿಕಿತ್ಸೆಯ ಮೂಲಕ ಹೆಣ್ಣು ಮಗು ಜನಿಸಿ, 20 ನಿಮಿಷಗಳಲ್ಲಿ ಮೃತಪಟ್ಟಿದೆ ಎಂದು ಹೇಳಿದ್ದಾರೆ.