ಟ್ವಿಟರ್ ನಲ್ಲಿ ಆವಾಗವಾಗ ತಮ್ಮ ಫ್ಯಾನ್ಸ್ ಕೇಳುವ ಪ್ರಶ್ನೇಗಳಿಗೆ ಉತ್ತರ ಕೊಡ್ತಾರೆ ಕಿಂಗ್ ಖಾನ್. ಸದ್ಯ ಜವಾನ್ ಚಿತ್ರದ ಯಶಸ್ಸಿನ ಗುಂಗಿನಲ್ಲಿ ಇದ್ದಾರೆ. ಟ್ವಿಟರ್ ನಲ್ಲಿ ಕೆಲವೊಂದು ಪ್ರಶ್ನೇಗಳು ಫನ್ನಿಯಾಗಿದ್ರೆ ಮತ್ತೆ ಕೆಲವು ಪ್ರಶ್ನೇಗಳು ತುಂಬಾನೇ ಸಿರೀಯಸ್ ಆಗಿರ್ತಾವೆ. ಇಂತಹ ಪ್ರಶ್ನೇಗಳಿಗೆ ಶಾರುಖಾನ್ ಖಡಕ್ ಆಗಿಯೇ ಉತ್ತರ ನೀಡ್ತಾರೆ.
ಇದೀಗ ಇದೇ ರೀತಿ ಕೇಳಿದ ಪ್ರಶ್ನೇಗೆ ಶಾರುಕ್ ಕೊಟ್ಟಿರುವ ಉತ್ತರ ವೈರಲ್ ಆಗುತ್ತಿದೆ. ಅಭಿಮಾನಿಯೊಬ್ಬರು ಶಾರುಖ್ ನೀವು ಧೂಮಪಾನವನ್ನು ತ್ಯಜಿಸಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಕಿಂಗ್ ಖಾನ್ ಹೌದು ಎಂದಿದ್ದಾರೆ. ನಂತರ ಈಗ ಸತ್ಯ ಹೇಳುತ್ತಿದ್ದೇನೆ ಎಂದು ಮಾತು ಮುಂದುವರೆಸುತ್ತಾನಾನು ಸುಳ್ಳು ಹೇಳಿದೆ. ಕ್ಯಾನ್ಸರ್ ಸ್ಟಿಕ್ ನ ಕಡ್ದಿಯ ಹೊಗೆ ನನ್ನ ಸುತ್ತಲೂ ಸುತ್ತಿಕೊಂಡಿದೆ ಎಂದರು. ಇದನ್ನು ಕೇಳಿದ ಫ್ಯಾನ್ಸ್ ಸಿಕ್ಕಾಪಟ್ಟೆ ಇಮೋಷನಲ್ ಆದರು.
ಇದಕ್ಕೆ ಉತ್ತರಿಸಿದ ಅಭಿಮಾನಿಯೊಬ್ಬರು ಪ್ಲೀಸ್ ಹೀಗೆಲ್ಲ ಹೇಳಬೇಡಿ. ನೀವು ತುಂಬ ವರ್ಷ ಬದುಕಬೇಕು. ನಿಮ್ಮ ಪ್ರೀತಿ ಜಗತ್ತಿಗೆ ಅಗತ್ಯ. ನಿಮ್ಮನ್ನು ಹಾಗೂ ನಿಮ್ಮ ಆಕ್ಟಿಂಗ್ ನ್ನ ಇಷ್ಟ ಪಡುವವರು ಬಹಳ ಜನ ಇದ್ದಾರೆ ಎಂದಿದ್ದಾರೆ.
2011 ರಲ್ಲಿ ಸಂದರ್ಶನವೊಂದರಲ್ಲಿ ಶಾರುಖ್, ತಮಗೆ ರಾತ್ರಿ ನಿದ್ರೆ ಬರುವುದಿಲ್ಲ. ಇಂತಹ ಸಮಯದಲ್ಲಿ ತಾವು ಸ್ಮೋಕ್ ಮಾಡೋದಾಗಿ ಹೇಳಿದ್ದರು. ಅಲ್ಲದೇ ಸುಮಾರು 100 ಸಿಗರೇಟ್ ಸೇದೋದಾಗಿ ಹೇಳಿದ್ದರು. ಸ್ಮೋಕಿಂಗ್ ಮಾಡುತ್ತ ಊಟ ಮಾಡುವುದನ್ನು ಒಮ್ಮೊಮ್ಮೆ ಮರೆತು ಬಿಡುತ್ತೇನೆ. ನೀರು ಕೂಡ ಸರಿಯಾಗಿ ಕುಡಿಯುವುದಿಲ್ಲ ಎಂದು ಹೇಳಿದ್ದರು.
ಬಹುಶಃ ಇದೇ ಸಂದರ್ಶನ ನೋಡಿದ್ದ ಅಭಿಮಾನಿ ಸ್ಮೋಕಿಂಗ್ ಬಗ್ಗೆ ಈಗ ಪ್ರಶ್ನೇ ಕೇಳಿರಬಹುದು.