ಗುಜರಾತ್ನಲ್ಲಿ ಬಿಪೋರ್ಜಾಯ್(Biparjoy) ಚಂಡಮಾರುತ ದೊಡ್ಡ ಆತಂಕ ಮೂಡಿಸಿದೆ. ಅಲ್ಲಿಯ ಭಾವ್ ನಗರದಲ್ಲಿ ಭಾರಿ ಮಳೆಗೆ ಸಿಲುಕಿ ತಂದೆ-ಮಗ ಸಾವನ್ನಪ್ಪಿದ್ದಾರೆ. ನೀರಿನಲ್ಲಿ ಸಿಲುಕಿದ್ದ ಜಾನುವಾರುಗಳ ರಕ್ಷಣೆಗೆ ತೆರಳಿದ್ದ ತಂದೆ-ಮಗ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಗಾಳಿಯ ವೇಗ ಹೆಚ್ಚಾಗಿದ್ದು, ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಇಂದು ಈ ಚಂಡಮಾರುತ ಈಶಾನ್ಯಕ್ಕೆ ತಿರುವುಗುವ ಸಾಧ್ಯತೆ ಇದೆ. ಜೂನ್ 16 ರಂದು ಮುಂಜಾನೆ ಸೈಕ್ಲೋನಿಕ್ ಚಂಡಮಾರುತವಾಗಿ ದುರ್ಬಲಗೊಳ್ಳುತ್ತದೆ ಮತ್ತು ಅದೇ ವೇಳೆಗೆ ದಕ್ಷಿಣ ರಾಜಸ್ಥಾನದ ಮೇಲೆ ಕಡಿಮೆ ಒತ್ತಡಕ್ಕೆ ಒಳಗಾಗಲಿದೆ ಎಂದು ಅದು ಹೇಳಲಾಗಿದೆ.
ಚಂಡಮಾರುತದ ತೀವ್ರತೆಯು ಗಂಟೆಗೆ 105-115 ಕಿ.ಮೀಗೆ ಕಡಿಮೆಯಾಗಿದೆ. ಅತ್ಯಂತ ತೀವ್ರ ಸೈಕ್ಲೋನಿಕ್ ಚಂಡಮಾರುತದಿಂದ (ವಿಎಸ್‌ಸಿಎಸ್) ತೀವ್ರ ಸೈಕ್ಲೋನಿಕ್ ಚಂಡಮಾರುತಕ್ಕೆ (ಎಸ್‌ಸಿಎಸ್) ಬದಲಾಗಿದೆ.ಹೀಗಾಗಿ ಇಂದು ರಾಜಸ್ಥಾನದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಚಂಡಮಾರುತದಿಂದಾಗಿ ಗುಜರಾತ್ ನಲ್ಲಿ 524 ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಸುಮಾರು 940 ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.