ರಶ್ಮಿಕಾ ಮಂದಣ್ಣಗೆ ನ್ಯಾಷನಲ್ ಕ್ರಷ್ ಜೊತೆಗೆ ಕಾಂಟ್ರವರ್ಸಿ ಲೇಡಿ ಅಂತಲೂ ಕರೆಯುತ್ತಾರೆ. ಏಕೆಂದರೆ ಸದಾ ಒಂದಲ್ಲ್ ಒಂದು ಕಾಂಟ್ರುವರ್ಸಿಯಲ್ಲಿ ರಶ್ಮಿಕಾ ಮಂದಣ್ಣ ಇರ್ತಾರೆ. ಬಾಲಿವುಡ್ ಮಾತ್ರವಲ್ಲದೇ ಸದ್ಯ ಟಾಲಿವುಡ್ ನಲ್ಲೂ ಬಿಸಿಯಾಗಿದ್ದಾರೆ. ಎಷ್ಟೇ ಬಿಸಿಯಾಗಿದ್ರು ಕೂಡ ಒಂದು ಫೋಟೋ ಶೇರ್ ಮಾಡಿದ್ರೆ ಸಾಕು ಪಡ್ದೆ ಹುಡುಗ್ರು ನಿದ್ರೆ ಇಲ್ಲದೇ ನೋಡ್ತಾರೆ.
ರಶ್ಮಿಕಾ ಬಿಸಿಯೆನೊ ಆಗಿದ್ದಾರೆ. ಹಲವು ಸಿನಿಮಾಗಳಿಗೆ ಸೈನ್ ಮಾಡಿದಲ್ಲದೇ, ಪುಷ್ಪ-2 ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ. ಆದರೆ ನಟಿಗೆ ಆಕೆಯ ಮ್ಯಾನೇಜರ್ ಮೋಸ ಮಾಡಿದ್ದಾನಂತೆ. ಹೌದು ಸದ್ಯ ಈ ಸುದ್ದಿ ಸಖತ್ ವೈರಲ್ ಆಗುತ್ತಿದೆ.
ಆಕೆಯ ಮ್ಯಾನೇಜರ್ ರಶ್ಮಿಕಾಗೆ ಬರೋಬ್ಬರಿ 80 ಲಕ್ಷ ರೂಪಾಯಿಯ ಪಂಗನಾಮ ಹಾಕಿದ್ದಾನೆ. ಈ ವಿಚಾರ ಗೊತ್ತಾಗಿ ಕೆಲಸದಿಂದ ತೆಗೆದಿದ್ದಾರೆ ರಶ್ಮಿಕಾ. ಸದ್ಯ ಹೊಸ ಮ್ಯಾನೇಜರ್ ಒಬ್ಬರನ್ನ ನೇಮಕ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ಓಡಾಡುತ್ತಿದೆ. ವಂಚನೆ ಮಾಡಿದ ಮ್ಯಾನೇಜರ್ ಹಲವು ವರ್ಷಗಳಿಂದ ನಟಿಯ ಜೊತೆ ಕೆಲಸ ಮಾಡುತ್ತಿದ್ದರು. ಆದರೆ ರಶ್ಮಿಕಾಗೆ ಗೊತ್ತಿಲ್ಲದೇ ಮೋಸ ಮಾಡುತ್ತ ಬಂದಿದ್ದಾರೆ. ಈ ಬಗ್ಗೆ ನಟಿ ತುಟಕ್ ಪಿಟಕ್ ಅಂದಿಲ್ಲ. ಇದುವರೆಗೂ ಯಾವುದೇ ರೀತಿಯಮಾಹಿತಿ ತಿಳಿಸಿಲ್ಲ.