ಸೋಮವಾರ ಚಲುಸುತ್ತಿದ್ದ ಆಟೋದಲ್ಲಿ ತನ್ನ ಪ್ರೇಯಸಿಯ ಕತ್ತು ಸೀಳಿದ್ದಾನೆ ಪಾಗಲ್ ಪ್ರೇಮಿ. ಅಸಲಿಗೆ ಮುಂಬೈ ನ ಸಾಕಿನಾಕಾ ಬಳಿ ಜೋಡಿಯೊಂದು ಆಟೋದಲ್ಲಿ ಪ್ರಯಣಿಸುತ್ತಿತ್ತು. ಚಿಕ್ಕದೊಂದು ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಮಾತು ಕೂಡ ಜೋರಾಗ್ತಾನೇ ಇತ್ತು. ಅದೇ ಕೋಪದಲ್ಲಿ ಸಡನ್ ಆಗಿ ಪ್ರೇಮಿ ತನ್ನ ಪ್ರೇಯಸಿಯ ಕತ್ತನ್ನ ಚಾಕುವಿನಿಂದ ಸೀಳಿಯೇ ಬಿಟ್ಟ. ನಂತರ ಆಟೋದಿಂದ ಜಿಗಿದು ಎಸ್ಕೇಪ್ ಆಗಿದ್ದಾನೆ. ಈ ಘಟನೆ ನಡೆದಿದ್ದು ಹಾಡಗಹಲೇ.
ಯಾವ ವಿಚಾರಕ್ಕೆ ಕೊಲೆ ಆಯ್ತು ಅನ್ನೋದು ಇನ್ನು ತಿಳಿದು ಬಂದಿಲ್ಲ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಯುವತಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗಲಿಲ್ಲ. ಪಾಗಲ್ ಪ್ರೇಮಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.