ಮಧ್ಯ ಅಮೆರಿಕದ ಹೊಂಡುರಾಸ್ ಮಹಿಳಾ ಜೈಲಿನಲ್ಲಿ ದುರಂತವೊಂದು ಬೆಳಕಿಗೆ ಬಂದಿದೆ. ಈ ಜೈಲಿನಲ್ಲಿ ಗ್ಯಾಂಗ್ ವಾರ್ ನಡೆದಿದ್ದು, ಅನೇಕ ಕೈದಿಗಳು ತಮ್ಮ ಪ್ರಾಣ ಕಳೆದುಕೊಂಡಿರುವ ಕುರಿತು ವರದಿಯಾಗಿದೆ. ಹೀಗಾಗಿ ಜೈಲಿನ ಕೈದಿಗಳ ಸಂಬಂಧಿಗಳು ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಹೊಂಡುರಾಸ್ ನ ಮಹಿಳಾ ಕಾರಾಗೃಹದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಜೈಲಿನಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 41 ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಗ್ಯಾಂಗ್ ವೊಂದರಿಂದ ಹಿಂಸಾಚಾರ ನಡೆದಿದೆ ಎಂದು ಅಲ್ಲಿನ ಅಧ್ಯಕ್ಷ ಕ್ಸೊಮಾರಾ ಕ್ಯಾಸ್ಟ್ರೋ ಹೇಳಿದ್ದಾರೆ. ಗಲಭೆಯಲ್ಲಿ ಕನಿಷ್ಠ 26 ಜನ ಮಹಿಳೆಯರು ಸುಟ್ಟು ಕರಕಲಾಗಿದ್ದಾರೆ. ಇನ್ನುಳಿದ ಕೈದಿಗಳು ಗುಂಡೇಟು ಮತ್ತು ಚಾಕು ಇರಿತದಿಂದ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಜೈಲಿನಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ ಎದು ಗೈತಿಗಳು ಕುಟುಂಬಗಳ ಒಕ್ಕೂಟದ ಅಧ್ಯಕ್ಷ ಡೆಲ್ಮಾ ಆರ್ಡೋನೆಜ್ ತಿಳಿಸಿದ್ದಾರೆ. ಅಲ್ಲಿಯ ಮಾಧ್ಯಮಗಳ ವರದಿಯಂತೆ ಘಟನೆಯಲ್ಲಿ 41 ಮಹಿಳಾ ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಆಸ್ಪತ್ರೆಯಲ್ಲಿ 7 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಕೂಡ ಚಿಂತಾಜನಕವಾಗಿದ್ದು, ಜೈಲಿನಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ಸರ್ಕಾರ ಬಹಿರಂಗ ಪಡಿಸಿದೆ.
ಬ್ಯಾರಿಯೋ 18 ಗ್ಯಾಂಗ್, ಮಹಿಳೆಯರ ಸೆಲ್ ಗೆ ನುಗ್ಗಿ ಕೈದಿಗಳನ್ನು ಕೊಲ್ಲಲು ಆರಂಭಿಸಿತು. ಅದರ ನಂತರ ಬೆಂಕಿ ಹಚ್ಚಿತು. ಬ್ಯಾರಿಯೋ 18 ಗ್ಯಾಂಗ್ ಭಯದಿಂದ ಬದುಕುತ್ತಿದ್ದೇವೆ ಎಂದು ಕೈದಿಗಳು ಈ ಹಿಂದೆ ಹೇಳಿದ್ದರು ಎನ್ನಲಾಗಿದೆ