Hyderabad: ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ 63 ವರ್ಷದ ಸ್ವಾಮೀಜಿಯನ್ನ್ ಆಂಧ್ರ ಪೊಲೀಸರು ಬಂಧಿಸಿದ್ದಾರೆ. ಇಷ್ಟೇ ಅಲ್ಲ ಆ ಬಾಲಕಿಯನ್ನು ಎರಡು ವರ್ಷಗಳ ಕಾಲ ಆಶ್ರಮದಲ್ಲಿ ಚೈನ್ ಹಾಕಿ ಕೂಡಿ ಹಾಕಿದ್ದ. ಪ್ರತಿನಿತ್ಯ ಆಕೆಯ ಮೇಲೆ ಅತ್ಯಾಚಾರ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸ್ವಾಮಿ ಪೂರ್ಣಾನಂದ, ವೆಂಕೋಜಿಪಾಲೆಂ ಎಂಬ ಪ್ರದೇಶದಲ್ಲಿ ಅನಾಥಾಶ್ರಮ ಮತ್ತು ವೃದ್ದಾಶ್ರಮ ನಡೆಸುತ್ತಿದ್ದ. ಸಂತ್ರಸ್ತೆ ವಿಜಯವಾಡದಲ್ಲಿ ನೀಡಿದ ದೂರಿನ ಮೇರೆಗೆ ಪೊಲೀಸರು ಪೂರ್ಣಾನಂದ ಸ್ವಾಮಿಯನ್ನು ಅರೆಸ್ಟ್ ಮಾಡಿದ್ದಾರೆ. ಸಂತ್ರಸ್ತೆ ಕಂಪ್ಲೆಂಟ್ ನಲ್ಲಿ ತನ್ನನ್ನು ಆಶ್ರಮದ ಕೊಣೆಯೊಂದರಲ್ಲಿ ಸರಪಳಿಯಿಂದ ಕಟ್ತಿ ಹಾಕಿದ್ರು. ಚಿತ್ರಹಿಂಸೆ ನೀಡುತ್ತಿದ್ದರು. ಪದೇ ಪದೇ ಅತ್ಯಾಚಾರ ಮಾಡುತ್ತಿದ್ದರು ಎಂದು ಹೇಳಿದ್ದಾಳೆ.
ಸದ್ಯ ಸಂತ್ರಸ್ತೆಯನ್ನು ವಿಜಯವಾಡ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಸಂತ್ರಸ್ತೆ ಚಿಕ್ಕ ವಯಸ್ಸಿನಲ್ಲಿ ತನ್ನ ಹೆತ್ತವರನ್ನು ಕಳೆದುಕೊಂಡಿದ್ದಳು. ಐದನೇ ತರಗತಿ ಮುಗಿಸಿದ ಬಳಿಕ ಎರಡು ವರ್ಷಗಳ ಹಿಂದೆ ವಿಶಾಖಾಪಟ್ಟಣಂನ ಜ್ನಾನಾನಂದ ಆಶ್ರಮದ ಅನಾಥಾಶ್ರಮದಲ್ಲಿ ಆಕೆಯ ಸಂಬಂಧಿಕರು ಸೇರಿಸಿದ್ದರು. ಆಶ್ರಮದಲ್ಲಿ ಚಿತ್ರಹಿಂಸೆ ತಾಳಲಾರದೇ ಕೆಲವರು ಓಡಿ ಹೋಗಿದ್ದಾರೆ.

