ಸಾಮಾನ್ಯವಾಗಿ ಎಲ್ಲಿಗಾದ್ರು ಉಳಿದುಕೊಳ್ಳಲು ಹೋಟೆಲ್ ರೂಂ ಬುಕ್ ಮಾಡ್ತಾರೆ. ಎರಡ್ಮೂರು ದಿನಕ್ಕೆ ಬುಕ್ ಮಾಡ್ತಾರೆ. ಅಬ್ಬಬ್ಬಾ ಅಂದ್ರು ಒಂದು ವಾರ ಹೋಟೆಲ್ ನಲ್ಲಿ ಇರಬಹುದು. ಆದ್ರೆ ಇಲ್ಲೊಬ್ಬ ಆಸಾಮಿ ಬರೋಬ್ಬರಿ ಎರಡು ವರ್ಷಗಳ ಕಾಲ ಹೊಟೆಲ್ ರೂಂ ಬುಕ್ ಮಾಡಿ ಇದ್ದ್. ಅದೂ ಸಾಮಾನ್ಯ ಹೋಟೆಲ್ ನಲ್ಲಿ ಅಲ್ಲ ಫೈವ್ ಸ್ಟಾರ್ ಹೋಟೆಲ್ ನಲ್ಲಿ.
ಕೇವಲ ಎರಡು ವರ್ಷ ಇದ್ದಿದ್ದು ಇಲ್ಲಿ ಅಶ್ಟೊಂದು ಹೈ ಲೈಟ್ಸ ಅಲ್ಲ. ಬದಲಾಗಿದೆ ಎರಡು ವರ್ಷಗಳ ಕಾಲ ಫೈವ್ ಸ್ಟಾರ್ ಹೋಟೆಲ್ ನ ಎಲ್ಲ ಸವಲತ್ತುಗಳನ್ನು ಅನುಭವಿಸಿದ್ದಾನೆ. ಅಲ್ಲಿಯ ಊಟವನ್ನು ಮಾಡಿದ್ದಾರೆ. ಎರಡು ವರ್ಷಕ್ಕೆ ಹೋಟೆಲ್ ಬಿಲ್ 58 ಲಕ್ಷ ವಾದಾಗ ಒಂದು ರೂಪಾಯಿ ಕೊಡದೇ ಎಸ್ಕೇಪ್ ಆಗಿದ್ದಾನೆ. ಇದೆಲ್ಲ ನಡೆದಿದ್ದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ.
ಅಂಕುಶ್ ದತ್ತ ಎಂಬ ವ್ಯಕ್ತಿ ದೆಹಲಿಯ ಫೈವ ಸ್ಟಾರ್ ರೊಸೀಟ್ ಹೌಸ್ ಹೊಟೆಲ್ ನಲ್ಲಿ ಬರೋಬ್ಬರಿ ೬೦೩ ದಿನಗಳ ಕಾಲ ಇದ್ದ. ಇವನು ಬಂದಿದ್ದು ಒಂದು ದಿನಕ್ಕೆ ಮಾತ್ರ ಆದ್ರೆ ಇದ್ದಿದ್ದು ಇಷ್ಟೊಂದು ದಿನ.
ಇಷ್ಟು ದಿನ ಆದ್ರು ಹೋಟೆಲ್ ನವರು ಹಣ ಕೇಳಿಲ್ವಾ ಅನ್ನೋ ಪ್ರಶ್ನೇ ನಿಮ್ಮಲ್ಲಿ ಮೂಡಿರುತ್ತೆ. ಚಾಲಾಕಿ ಅಂಕುಶ್ ಇಲ್ಲಿಯವರೆಗೂ ಮೂರು ಚೆಕ್ ಗಳನ್ನು ನೀಡಿದ್ದಾನೆ. ಒಂದು ಚೆಕ್ 10 ಲಕ್ಷ, ಎರಡನೇ ಚೆಕ್ 7 ಲಕ್ಷ ಮೂರನೇ ಚೆಕ್ 20 ಲಕ್ಷ. ಆದರೆ ಈ ಮೂರು ಚೆಕ್ ಗಳು ಬೌನ್ಸ್ ಆಗಿವೆ. ಇದಲ್ಲದೇ ಹೋಟೆಲ್ ನ ಸರ್ವರ್ ಹ್ಯಾಕ್ ಮಾಡಿದ್ದಾರೆ. ಅಂಕುಶ್ ತನ್ನೆಲ್ಲ ಬಿಲ್ ಗಳನ್ನು ಕ್ಲೀಯರ್ ಮಾಡಿದ್ದಾನೆ ಎನ್ನುವಂತೆ ಸರ್ವರ್ ನಲ್ಲಿ ತೋರಿಸುವಂತೆ ಮಾಡಿದ್ದಾನೆ.
ಇದೆಲ್ಲ ಮಾಡುವುದಕ್ಕೆ ಅಂಕುಶ್ ಗೆ ಹೋಟೆಲ್ ಸಿಬ್ಬಂಧಿ ಒಬ್ರು ಸಹಾಯ ಮಾಡಿದ್ದಾರೆ. ಅಂಕುಶ್ ಬಿಲ್ ಹಣವನ್ನು ಪಾವತಿ ಮಾಡಿದ್ದಾರೆ ಎಂದು ಸುಳ್ಳು ರಶೀದಿ ಕೊಟ್ತಿದ್ದಾರೆ.