Kornersite

Just In National

ತಾವು ಕಲಿತ ಐಐಟಿ ಕಾಲೇಜಿಗೆ ಬರೋಬ್ಬರಿ 315 ಕೋಟಿ ಅನುದಾನ ನೀಡಿದ ಹಳೆಯ ವಿದ್ಯಾರ್ಥಿ!

ಇನ್ಫೋಸಿಸ್ ನ ಸಹ-ಸಂಸ್ಥಾಪಕ ಹಾಗೂ ಅಧ್ಯಕ್ಷ ನಂದನ್ ನಿಲೇಕಣಿ ತಾವು ಓದಿದ್ದ ಐಐಟಿ ಬಾಂಬೆಗೆ 315 ಕೋಟಿ ರೂ. ದೇಣಿಗೆ ನೀಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಈ ಮೂಲಕ ಸಂಸ್ಥೆಗೆ ಹಳೆ ವಿದ್ಯಾರ್ಥಿ ನಿಲೇಕಣಿ ನೀಡಿದ ಒಟ್ಟು ದೇಣಿಗೆ 400 ಕೋಟಿ ರೂ. ಗೆ ತಲುಪಿದೆ. ಈ ಹಿಂದೆ ಅವರು ಐಐಟಿ ಬಾಂಬೆಗೆ 85 ಕೋಟಿ ರೂ.ದೇಣಿಗೆ ರೂಪದಲ್ಲಿ ನೀಡಿದ್ದರು. ಸದ್ಯ ಮತ್ತಷ್ಟು ಅನುದಾನ ನೀಡಿದ್ದಾರೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ ಪದವಿಗಾಗಿ ನಿಲೇಕಣಿ ಅವರು 1973 ರಲ್ಲಿ ಐಐಟಿ ಬಾಂಬೆ ಸೇರಿದ್ದರು. ಸದ್ಯ ಅವರು ತಾವು ಕಲಿತ ಕಾಲೇಜಿನೊಂದಿಗೆ ಒಡನಾಟದ 50 ವರ್ಷಗಳ ನೆನಪಿಗಾಗಿ ಹೊಸ ದೇಣಿಗೆಯನ್ನು ನೀಡುತ್ತಿರುವುದಾಗಿ ಹೇಳಿದ್ದಾರೆ.

ಇದರಿಂದಾಗಿ ವಿಶ್ವ ದರ್ಜೆಯ ಮೂಲಸೌಕರ್ಯ ಹೊಂದಲು ಸಹಾಯವಾಗುತ್ತದೆ. ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರಸಿದ್ಧ ಸಂಸ್ಥೆಯಲ್ಲಿ ಟೆಕ್ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಪೋಷಿಸುತ್ತದೆ ಎಂದು ನಂದನ್ ನಿಲೇಕಣಿ ಟ್ವೀಟ್ ಮಾಡಿದ್ದಾರೆ.

ದೇಶದ ಹಳೆಯ ವಿದ್ಯಾರ್ಥಿ ನೀಡಿದ ಅತಿದೊಡ್ಡ ದೇಣಿಗೆಗಳಲ್ಲಿ ಒಂದಾಗಿರುವ ಈ ದೇಣಿಗೆಯು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಗಳಲ್ಲಿ ಜಾಗತಿಕ ನಾಯಕನಾಗಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಗಣನೀಯ ಕೊಡುಗೆ ನೀಡಲು ಐಐಟಿ- ಬಾಂಬೆಗೆ ಸಹಕಾರಿಯಾಗಲಿದೆ ಎಂದು ಅವರು ಬಣ್ಣಿಸಿದ್ದಾರೆ.

You may also like

National

ರಾಮಲೀಲಾ ಮೈದಾನದಲ್ಲಿ ಜಮಾಯಿಸುತ್ತಿರುವ ರೈತರು

ನವದೆಹಲಿ : ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ಇಂದು ದೆಹಲಿಯಲ್ಲಿ ಜಮಾಯಿಸುತ್ತಿದ್ದಾರೆ. ವಿವಿಧ ರೈತ ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಉತ್ಪನ್ನಗಳ ಕನಿಷ್ಠ
Just In Sports

ಹೋರಾಡಿ ಸೋತ ರಾಜಸ್ಥಾನ್ (Rajasthan) – ಸತತ ಎರಡನೇ ಜಯ ದಾಖಲಿಸಿದ ಪಂಜಾಬ್ (Punjab)

Guwahati: ನಾಯಕ ಶಿಖರ್‌ ಧವನ್‌ (Shikhar Dhawan), ಪ್ರಭ್‌ಸಿಮ್ರಾನ್‌ ಸಿಂಗ್‌ (Prabhsimran Singh) ಬ್ಯಾಟಿಂಗ್ ಹಾಗೂ ನಾಥನ್ ಎಲ್ಲಿಸ್ ಬೌಲಿಂಗ್‌ ದಾಳಿಯಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ