ಬೆಂಗಳೂರು: ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ಮಾಜಿ ಸಚಿವ ವಿ.ಸೋಮಣ್ಣ (V.Somanna) ಬಿಜೆಪಿ ಹೈಕಮಾಂಡ್ಗೆ (BJP High Command) ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಒಂದು ಅವಕಾಶ ನೀಡಿ. ಎರಡು ಬಾರಿ ನಾನು ದೆಹಲಿಗೆ ಹೋಗಿ ಬಂದಿದ್ದೇನೆ. ವರಿಷ್ಠರ ಮುಂದೆ ಹಲವಾರು ಸಂಗತಿಗಳ ಕುರಿತು ಹೇಳಿದ್ದೇನೆ. ನನಗೆ 45 ವರ್ಷದ ರಾಜಕೀಯ ಅನುಭವವಿದೆ. ನನ್ನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಕೇಳಿದ್ದೇನೆ. ನನಗೆ ನೂರು ದಿನವಾದರೂ ಅಧ್ಯಕ್ಷನಾಗಿ ಮುಂದುವರೆಯುವ ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಸಾಕಷ್ಟು ಹಿನ್ನಡೆ ಆಗಿದೆ. ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುವ ಶಕ್ತಿ ಇದೆಯಾ ಎಂದು ಕೆಲವರು ಮಾತನಾಡಬಹುದು. ನಾನು ಪಕ್ಷದಲ್ಲಿ ಹಿರಿಯನಿದ್ದೇನೆ. ಎಲ್ಲರನ್ನು ನಾನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ದೊಡ್ಡವರ ಥರನೇ ನನ್ನದು ಒಂದು ತೆರೆದ ಪುಸ್ತಕ. 43 ದಿನ 50 ಡಿಗ್ರಿ ಬಿಸಿಲಲ್ಲಿ ಓಡಾಡಿ ಉಪ ಚುನಾವಣೆಗಳನ್ನು ಗೆಲ್ಲಿಸಿದ್ದೇನೆ. ನನಗೆ ಅಧ್ಯಕ್ಷನಾಗುವ ಎಲ್ಲ ಅರ್ಹತೆಗಳೂ ಇವೆ ಎಂದು ಹೇಳಿದ್ದಾರೆ.