ತೆಲಂಗಾಣ ಸರ್ಕಾರ ರಾಜ್ಯಕ್ಕೆ ಭತ್ತ ನೀಡುವುದಾಗಿ ಭರವಸೆ ನೀಡಿದ್ದು, ಛತ್ತೀಸಗಢ (Chhattisgarh) ಸರ್ಕಾರವು ರಾಜ್ಯಕ್ಕೆ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುವುದಾಗಿ ಹೇಳಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪಂಜಾಬ್ ಸರ್ಕಾರ ನವೆಂಬರ್ ತಿಂಗಳಿನಿಂದ ಕೊಡುವುದಾಗಿ ಹೇಳಿದೆ. NCCF ಕೇಂದ್ರಿಯ ಭಂಡಾರ, ನಫೆಡ್ನಿಂದ ಕೊಟೆಷನ್ ಕೇಳಿದ್ದೇವೆ. ದರ, ಗುಣಮಟ್ಟ, ಪ್ರಮಾಣ ನೋಡಿ ಮುಂದಿನ ತೀರ್ಮಾನ ಮಾಡಲಾಗುವುದು ಎಂದರು.
10 ಕೆಜಿ ಅಕ್ಕಿ ನೀಡಲು ಬೇರೆ ರಾಜ್ಯಗಳ ಸಂಪರ್ಕ ಮಾಡಲಾಗುತ್ತಿದೆ. ರಾಜ್ಯಕ್ಕೆ 2 ಲಕ್ಷದ 29 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕು. ಪಂಜಾಬ್ ರಾಜ್ಯದಲ್ಲಿ ಸ್ಟಾಕ್ ಇಲ್ಲ. ಆಂಧ್ರ ಪ್ರದೇಶದ ಬಳಿಯೂ ಸಿಕ್ಕಿಲ್ಲ. ಸರ್ಕಾರಿ ಸಂಸ್ಥೆಗಳ ಕೊಟೇಷನ್ ಕರೆದಿದ್ದೇವೆ. ಮೂರು ಗಂಟೆಗೆ ಮೆಗೋಸಿಯೇಷನ್ ಇದೆ. ದರ ಎಷ್ಟು ಏನು ಅನ್ನೋದರ ಬಗ್ಗೆ ಚರ್ಚಿಸಲು ಇಂದು 3 ಗಂಟೆಗೆ ಸಭೆ ಕರೆದಿದ್ದೇವೆ. ರಾಗಿ, ಜೋಗಿ ನಮ್ಮ ಬಳಿ ಇದೆ. ಆದರೆ ಇವು ಎರಡು ತಿಂಗಳಿಗೆ ಮಾತ್ರ ಸಾಕಾಗುತ್ತದೆ ಎಂದರು.
ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ವಿರುದ್ಧ ಮಾತನಾಡಿದ ಅವರು, ಪ್ರತಿಭಟನೆ ಮಾಡಲು ಸ್ವಾತಂತ್ರ್ಯ ಇದೆ. ಪ್ರತಿಭಟಿಸಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.