ಕಾಂಗ್ರೆಸ್ ಸರ್ಕಾರ ಗೃಹ ಜ್ಯೋತಿ ಸ್ಕೀಮ್ ಅನೌನ್ಸ್ ಮಾಡ್ತಾ ಇದ್ದಂತೆ ಇಲ್ಲಿಯವರೆಗೂ ಬರೋಬ್ಬರಿ 34 ಲಕ್ಷ ಅರ್ಜಿಗಳಿ ಸಲ್ಲಿಕೆಯಾಗಿವೆ. ಕೇವಲ ಗೃಹ ಜ್ಯೋತಿ ಮಾತ್ರವಲ್ಲ ಶಕ್ತಿ ಯೋಜನೆ ಅಡಿಯಲ್ಲಿ ಕಳೆದ ಹದಿಮೂರು ದಿನಗಳಲ್ಲಿ 6.75 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ.
ಸರ್ಕಾರದ ಉಚಿತ ಯೋಜನೆಗೆ ಸಿಕ್ಕಾಪಟ್ಟೆ ಭರ್ಜರಿ ರಿಸ್ಪಾನ್ಸ್ ಸಿಕ್ಕಿದೆ. ಇಂಧನ ಇಲಾಖೆ ಹಾಗೂ ಸಾರಿಗೆ ಇಲಾಖೆ ನೀಡಿರುವ ಅಂಕಿ ಅಂಶಗಳಿದು. ಇಂಧನ ಇಲಾಖೆಯ ಮಾಹಿತಿ ಪ್ರಕಾರ ಅರ್ಜಿ ಸಲ್ಲಿಕೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ 34 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕೂಡ ಅರ್ಜಿಗಳು ಸಲ್ಲಿಕೆಯಾಗುತ್ತಲೇ ಇವೆ. ಕೆಲವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದರೇ ಇನ್ನು ಕೆಲವರು ಖುದ್ದಾಗಿ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸುತ್ತಿದ್ದಾರೆ.
ಕೇವಲ ಗೃಹ ಜ್ಯೋತಿ ಮಾತ್ರವಲ್ಲ ಬದಲಿಗೆ ಶಕ್ತಿ ಯೋಜನೆಗೂ ರಿಸ್ಪಾನ್ಸ್ ಸಖತ್ತಾಗಿದೆ. ಮಹಿಳೆಯರು ದಿನನಿತ್ಯ ಓಡಾಡಲು ಹಾಗೂ ಫ್ರೀ ಬಸ್ ಅನೌನ್ಸ್ ಆಗ್ತಾ ಇದ್ದಂತೆ ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಾಗಿ ಪ್ರಯಾಣ ಬೆಳೆಸಿದ್ದಾರೆ. ವೀಕೆಂಡ್ ನಲ್ಲಂತೂ ಬಸ್ ಗಳು ತುಂಬಿ ತುಳುಕುತ್ತಿದ್ದವು.
ಶೀಘ್ರದಲ್ಲಿ ಗೃಹ ಲಕ್ಷ್ಮಿ ಯೋಜನೆ ಕೂಡ ಜಾರಿಯಾಗಲಿದೆ. ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗಿದೆ ಎಂದು ಸಚಿವೆ ಲಕ್ಶ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.