ಗೋವಾದಲ್ಲಿ ಮುಂಗಾರು ಶುರುವಾಗಿದೆ. ಇದೇ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಆದರೂ ಪ್ರವಾಸಿಗರು ಬರುತ್ತಲೇ ಇದ್ದಾರೆ.
ಗೋವಾ ಟ್ರಿಪ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬ್ಯಾಚುಲರ್ಸ್ ಗಳಿಗಂತೂ ಚಿಲ್ ಮಾಡಲು ಪರಫೆಕ್ಟ್ ಪ್ಲೇಸ್. ರಿಲ್ಯಾಕ್ಸ್ ಮಾಡಲು, ಪಾರ್ಟಿ ಮಾಡಲು, ಇನ್ನು ಕೆಲವರು ಬೀಚ್ ನಲ್ಲಿ ಕಾಲ ಕಳೆಯಲು ಗೋವಾಗೆ ಹೋಗ್ತಾರೆ. ಗೋವಾ ಅಂದ್ರೆನೇ ಬೀಚ್. ಆದ್ರೆ ಈ ಬೀಚ್ ಗಳಿಗೆ ಹೋಗುವಂತಿಲ್ಲ ಎಂದು ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.
ಆದರೆ ನಮ್ ಜನ ಕೇಳಬೇಕಲ್ವಾ ಅಧಿಕಾರಿಗಳು ನೋ ಎಂಟ್ರಿ ಅಂದ್ರು ಕ್ಯಾರೇ ಅನ್ನದೇ ಪ್ರವಾಸಿಗರು ಬರ್ತಾ ಇದ್ದಾರೆ. ಆದರೆ ಬಹುತೇಕ ಪ್ರವಾಸಿಗರ ಪ್ರಮಾಣ ಕಡಿಮೆಯಾಗಿದೆ. ಬೀಚ್ ಗಳಿಲ್ಲಿ ನಡೆಯುವ ವಾಟರ್ ಗೇಮ್ ಗಳಿಗೂ ಬ್ರೇಕ್ ಹಾಕಿದ್ದಾರೆ.