ಯುವಕನೊಬ್ಬ ಮದುವೆಯಾಗಲು ಹೆಣ್ಣು ಸಿಗದೇ ಇರೋದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲ್ಲಾಪುರದ ಕಿರಗಾರಿ ಮನೆ ಬಳಿ ನಡೆದಿದೆ. ಕಿರಗಾರಿಮನೆಯ ನಾಗರಾಜ್ ಗಣಪತಿ ಗಾಂವ್ಕರ್ (35) ಆತ್ಮಹತ್ಯೆ ಮಾಡಿಕೊಂಡವ. ಕೃಷಿ ಮಾಡಿಕೊಂಡಿದ್ದ ನಾಗರಾಜ್ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮನನೊಂದಿದ್ದ.
ಹವ್ಯಕ ಸಮುದಾಯದ ಯುವಕರಿಗೆ ಮದುವೆಗೆ ಹುಡುಗಿ ಸಿಗೋದು ತುಂಬಾ ಕಷ್ಟ. ಕೃಷಿ ಮಾಡಿಕೊಂಡ ಯುವಕರಿಗಂತೂ ಹುಡುಗಿ ಮನೆಯವರು ಹೆಣ್ಣು ಕೊಡುವುದಿಲ್ಲ. ಈ ಗೋಳು ಬಹುತೇಕರದ್ದು. ಇದೇ ಕಾರಣಕ್ಕೆ ಮನೆಯ ಸಮೀಪದ ಗುಡ್ಡದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.