Kornersite

Just In Karnataka State

ಶಾಲೆಯಲ್ಲಿ ಮಕ್ಕಳಿಂದ ಬಕ್ರೀದ್ ನಮಾಜ್, ಕುರಾನ್ ಮಾಡಿದ ಆರೋಪ: ಕ್ಷಮೆ ಕೇಳಿದ ಆಡಳಿತ ಮಂಡಳಿ

ಹಾಸನ: ಚನ್ನಪಟ್ಟಣದ ನಾಗೇಶ್ ಎಜುಕೇಶನ್ ಟ್ರಸ್ಟ್ ನ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಅಸಲಿಗೆ ಶಾಲೆಯ ಮಕ್ಕಳನ್ನು ಒಂದೆಡೆ ಸೇರಿಸಿ ಬಕ್ರೀದ್ ಹಿನ್ನೆಲೆ ಖುರಾನ್ ಶ್ಲೋಕವನ್ನು ಉರ್ದು ಭಾಷೆಯಲ್ಲಿ ಪಟಣೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಆಡಳಿತ ಮಂಡಳಿ, ಮಕ್ಕಳಿಂದ ಪಾರ್ಥನೆ ಮಾಡಿಸಿಲ್ಲ. ಕೇವಲ ಭಾವೈಕ್ಯತೆ ಮೂಡಿಸುವ ನಿಟ್ಟಿನಲ್ಲಿ ಬಕ್ರೀದ್ ಹಬ್ಬದ ಮಹತ್ವವನ್ನು ಹೇಳಿದೇವು. ಯಾವುದೇ ಸ್ಪೇಷಲ್ ಡೇ ಇದ್ದರೂ ಹೀಗೆ ಮಾಡುತ್ತೇವೆ ಎಂದು ಹೇಳಿದರು.

ಶಾಲೆಯ ಸಭಾಂಗಣದಲ್ಲಿ ಬಕ್ರೀದ್ ಹಬ್ಬದಂದು ಖುರಾನ್ ಪಟನೆ ಮಾಡಲಾಗಿದೆ. ಉಳಿದ ಮಕ್ಕಳು ಕಣ್ನು ಮುಚ್ಚಿಕೊಂಡು ಕೈ ಮುಗಿದುಕೊಂಡು ಕುಳಿತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಕೆಲ ಪೋಷಕರು ಈ ವಿಚಾರಕ್ಕೆ ಆಕ್ಷೇಪ ಕೂಡ ಮಾಡಿದ್ದಾರೆ. ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಂತರ ಶಾಲೆಯ ಆಡಳಿತ ಮಂಡಳಿಯವರು ಇನ್ಮುಂದೆ ಈ ರೀತಿ ಆಚರಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಶಾಲೆಯ ಪ್ರಾಂಶುಪಾಲರಾದ ಸುಜಾ ಫಿಲಿಪ್ ಅವರು ಹೇಳುವ ಪ್ರಕಾರ ನಮ್ಮ ಶಾಲೆಯಲ್ಲಿ ಜಾತ್ಯಾತೀತ ತತ್ವ ಪಾಲನೆ ಮಾಡಲಾಗುತ್ತದೆ. ಬಕ್ರೀದ್ ಹಿನ್ನೆಲೆ ಮಕ್ಕಳಿಗೆ ಹಬ್ಬದ ಬಗ್ಗೆ ಅರಿವು ಮೂಡಿಸಲಾಗಿದೆ. ಬೇರೆ ಯಾವ ಮಕ್ಕಳಿಂದಲೂ ಪ್ರಾರ್ಥನೆ ಮಾಡಿಸಿಲ್ಲ. ಕೇವಲ ಮುಸ್ಲಿಂ ಮಕ್ಕಳು ಮಾತ್ರ ಪ್ರಾರ್ಥನೆ ಮಾಡಿದ್ದು, ಉಳಿದವರು ಮೌನವಾಗಿದ್ದರು ಅಷ್ಟೇ. ಆದರೂ ಇಂತಹ ಆಚರಣೆಯಿಂದ ಸಮಸ್ಯೆಯಾಗೋದಾದ್ರೆ ಈ ರೀತಿಯ ಆಚರಣೆ ಇನ್ಮುಂದೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ