ಕಿಚ್ಚ ಸುದೀಪ್ (kichcha sudeep) ನಟನೆಯ 46ನೇ ಸಿನಿಮಾ ಮೇಲೆ ಎಲ್ಲರ ನಿರೀಕ್ಷೆ ಇದೆ. ಇದೀಗ ಈ ಸಿನಿಮಾದ ಟೀಸರ್ ಕೂಡ ಬಿಡಿಗಡೆಯಾಗಿದೆ. ವಿಕ್ರಾಂತ್ ರೋಣ ಸಿನಿಮಾ ಬಳಿಕ ಸುದೀಪ್ ಅವರು ಒಪ್ಪಿಕೊಂಡ ಚಿತ್ರ ಇದು. ಈಗ ಸೋಶಿಯಲ್ ಮಿಡಿಯಾದಲ್ಲಿ #kichcha46 ಹ್ಯಾಶ್ ಟ್ಯಾಗ್ ಕೂಡ್ ಟ್ರೆಂಡ್ ಆಗುತ್ತಿದೆ. ಸುದೀಪ್ ಅಭಿಮಾನಿ ವಲಯದಲ್ಲಿ ಟೀಸರ್ (Kiccha 46) ವೈರಲ್ ಆಗುತ್ತಿದೆ.
ಕೇವಲ ಅಭಿಮಾನಿಗಳು ಮಾತ್ರವಲ್ಲ ಸ್ಯಾಂಡಲ್ ವುಡ್ ನ ಅನೇಕ ಸೆಲೆಬ್ರಿಟಿಗಳು ಕೂಡ ಕಾಯ್ತಾ ಇದ್ದರು. ಡಾಲಿ ಧನಂಜಯ್, ನಿರೂಪ್ ಭಂಡಾರಿ, ಸಪ್ತಮಿ ಗೌಡ, ಅನೂಪ್ ಭಂಡಾರಿ, ಡಾರ್ಲಿಂಗ್ ಕೃಷ್ಣ, ಅಮೃತಾ ಅಯ್ಯಂಗಾರ್ ಮುಂತಾದವರು ಪ್ರಮೋಷನಲ್ ವಿಡಿಯೋದಲ್ಲಿ ಕಾಣಿಸಿಕೊಂಡು ಕುತೂಹಲ ಹೆಚ್ಚಿಸಿದ್ದರು.
ಕೇವಲ ಇದೊಂದೇ ಮಾತ್ರವಲ್ಲ ಕಿಚ್ಚ ಸುದೀಪ್ ಬ್ಯಾಕ್ ಟು ಬ್ಯಾಕ್ ಮೂರು ಪ್ರಾಜೆಕ್ಟ್ ಗಳಿಗೆ ಸಹಿ ಹಾಕಿದ್ದಾರೆ. Kiccha 46 ನಲ್ಲಿ ತುಂಬಾನೇ ರಗಡ್ ಲುಕ್ ನಲ್ಲಿ ಕಾಣ್ತಾ ಇದ್ದಾರೆ. ಟೀಸರ್ ನಲ್ಲಿರುವ ಡೈಲಾಗ ಎಲ್ಲರ ಗಮನ ಸೆಳೆದಿದೆ. ‘ನಾನು ಯುದ್ದಕ್ಕೆ ಇಳಿದ ಮೇಲೆ ದಯೆ, ಕ್ಷಮೆ, ಸಂಧಾನ ಇದು ಯಾವುದೂ ಇರೋದಿಲ್ಲ. ನಾನು ಮನುಷ್ಯ ಅಲ್ಲ. ನಾನು ರಾಕ್ಷಸ’ ಎಂದು ಟೀಸರ್ ಕೊನೆಯಲ್ಲಿ ಸುದೀಪ್ ಹೇಳುವ ಡೈಲಾಗ್ ಟ್ರೆಂಡ್ ಆಗುತ್ತಿದೆ.