ನಟ ಮಾಸ್ಟರ್ ಆನಂದ ಅವರ ಪುತ್ರಿ ವಂಶಿಕಾ ಆನಂದ್ ಅವರ ಹೆಸರಿನಲ್ಲಿ ವಂಚನೆ ನಡೆದಿದೆ. ಈ ಬಗ್ಗೆ ವಂಶಿಕಾ ಅವರ ತಾಯಿ ಯಶಸ್ವಿನಿ ಸದಾಶಿವನಗರ ಪೊಲೀಸ್ ಟಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿಶಾ ನರಸಪ್ಪ ಎನ್ನುವವರನ್ನು ಬಂಧಿಸಿದ್ದಾರೆ.
ಆರೋಪಿ ನಿಶಾ ನರಸಪ್ಪ ಹಾಗೂ ವಂಶಿಕಾ ತಾಯಿ ಯಶಸ್ವಿನಿ ಇಬ್ಬರಿಗೂ ಪರಿಚಯವಿತ್ತು. ಇಬ್ಬರೂ ಕೂಡ ಇನ್ ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದರು. ಕಾರ್ಯಕ್ರಮವೊಂದಕ್ಕೆ ವಂಶಿಕಾ ಹಾಗೂ ಅವರ ತಾಯಿ ಯಶಸ್ವಿನಿ ಅವರನ್ನು ಆರೋಪಿ ನಿಶಾ ಇನ್ವೈಟ್ ಮಾಡಿದ್ದರು. ಈ ಕಾರಣದಿಂದ ಇಬ್ಬರೂ ಮತ್ತಷ್ಟು ಹತ್ತಿರವಾಗಿದ್ದರು.
ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುತ್ತೇವೆ. ನಿಮ್ಮ ಮಕ್ಕಳ ಫೋಟೋಶೂಟ್ ಮಾಡಿಸಿ ಕೊಡುತ್ತೇವೆ ಎಂದು ಪೋಷಕರ ಬಳಿ ಹಣ ಪಡೆದಿದ್ದಾರೆ. ನಂತರ ಯಾವುದೇ ಅವಕಾಶ ನೀಡದೇ ವಂಚನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.
ಸದ್ಯ ಆರೋಪಿ ನಿಶಾ ನರಸಪ್ಪ ಅವರನ್ನು ಸದಾಶಿವ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.