ವಿರಾಟ್ ಕೊಹ್ಲಿಯನ್ನು ನೋಡಲು ವೆಸ್ಟ್ ಇಂಡೀಸ್ ನ ಆಟಗಾರನ ತಾಯಿ ಸ್ಟೇಡಿಯಂಗೆ ಬಂದಿದ್ದರು. ವಿರಾಟ್ ಕೊಹ್ಲಿ ಶತಕ ಬಾರಿಸೋದನ್ನ ನೋಡಬೇಕು ಅನ್ನೋದು ಆ ತಾಯಿಯ ಆಸೆಯಾಗಿತ್ತು. ವಿರಾಟ್ ಕೂಡ ಆ ತಾಯಿಗೆ ನಿರಾಸೆಗೊಳಿಸದೇ ಶತಕ ಬಾರಿಸಿದರು. ಬಳಿಕ ವಿರಾಟ್ ನನ್ನು ಭೇಟಿಯಾದ ತಾಯಿ ಭಾವುಕರಾಗಿ ಅತ್ತೇ ಬಿಟ್ಟರು.
ವೆಸ್ಟ್ ಇಂಡೀಸ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾತ್ ಕೊಹ್ಲಿ ಶತಕ ಬಾರಿಸಿದ್ದಾರೆ. ಈ ಮೂಲಕ ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ ಜೋಶುವಾ ಡಾ ಸಿಲ್ಟಾ ಅವರ ತಾಯಿಯನ್ನು ಖುಷಿಪಡಿಸಿದ್ದಾರೆ. ವಿರಾಟ್ ಶತಕ ಬಾರಿಸಿದಾಗ ಜೋಶುವಾ ಕಣ್ಣಲ್ಲಿ ನೀರು ತುಂಬಿತ್ತು. ತನ್ನ ತಾಯಿ ಸ್ಟೇಡಿಯಂಗೆ ಬಂದಿರೋದು ಕೇವಲ ನಿನ್ನನ್ನ ಅಂತ ವಿರಾಟ್ ಕೊಹ್ಲಿಗೆ ಜೋಶುವಾ ಹೇಳಿದ್ದರು.
ನಂತರ ಭೇಟಿ ಮಾಡಿದ ಜೋಶುವಾ ತಾಯಿ, ನಿನ್ನನ್ನು ನೋಡಿದ್ದು ನನಗೆ ತುಂಬಾನೇ ಖುಷಿ ಕೊಟ್ಟಿದೆ ಎಂದು ವಿರಾಟ್ ಗೆ ಹೇಳಿದರು. ಆಷ್ಟೇ ಅಲ್ಲ ಶತಕ ಬಾರಿಸಿ ನನ್ನಾಸೆ ನೇರವೇರಿಸಿದ್ದಕ್ಕೆ ಧನ್ಯವಾದ ತಿಳಿಸಿ, ತಬ್ಬಿಕೊಂಡರು. ಖುಷಿಯಿಂದ ಅಳುತ್ತಲೇ ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಿದರು.