Bangalore: ತನ್ನ ಪತ್ನಿಯನ್ನು ಕೊಲೆ ಮಾಡಿ ನಂತರ ಅತ್ತೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ ಅಳಿಯ. ಈ ಘಟನೆ ನಡೆದಿರೋದು ಬೆಂಗಳೂರಿನ ಮೂಡಲಪಾಳ್ಯದ ಶಿವಾನಂದ ನಗರದಲ್ಲಿ. ಅತ್ತೆಗೆ ಕರೆ ಮಾಡಿ ನಿಮ್ಮ್ ಮಗಳನ್ನು ಮರ್ಡರ್ ಮಾಡಿದ್ದೇನೆ ಬನ್ನಿ ಎಂದು ಕರೆದಿದ್ದಾನೆ ಆರೋಪಿ ಶಂಕರ್. ಅಸಲಿಗೆ ಶಂಕರ್ ಹಾಗೂ ಕೊಲೆಯಾದ 33 ವರ್ಷದ ಗೀತಾ ನಡುವೆ ಆಗ್ಗಾಗ್ಗೆ ಜಗಳವಾಗುತ್ತಿತ್ತು. ಗೀತಾಳಿಗೆ ಅಕ್ರಮ ಸಂಬಧ ಇತ್ತು ಅನ್ನೋದು ಶಂಕರ್ ನ ಆರೋಪ. ಇದೇ ಅನುಮಾನ ಕೊಲೆಯಲ್ಲಿ ಅಂತ್ಯವಾಗಿದೆ.
ಪತ್ನಿಯ ಕೊಲೆಯ ನಂತರ ಅತ್ತೆಗೆ ಕರೆ ಮಾಡಿದ ಶಂಕರ್, ನಿಮ್ಮ ಮಗಳನ್ನು ಕೊಲೆ ಮಾಡಿದ್ದೇನೆ ಬನ್ನಿ ಎಂದು ಕರೆದಿದ್ದಾನೆ. ನಂತರ ಪತ್ನಿಯ ಶವವನ್ನು ಸೋಫಾ ಮೇಲೆ ತಂದಿಟ್ಟು ತಾನೂ ಅಲ್ಲಿಯೇ ಕುಳಿತಿದ್ದ.
ಈ ಬಗ್ಗೆ ಆರೋಪಿ ಶಂಕರ್ ನ ಸಂಬಧಿ ರಾಜೇಶ್ವರಿ ಹೇಳೋ ಪ್ರಕಾರ ಮರ್ಯಾದೆಗೆ ಹೆದರಿ ಈ ಕೃತ್ಯ ಏಸಗಿದ್ದಾನೆ. ಗೀತಾ ಹಾಗೂ ಶಂಕರ್ ಎಲ್ಲರ ಜೊತೆ ಚೆನ್ನಾಗಿದ್ದರು. ಚೆನ್ನಾಗಿಯೇ ಮಾತನಾಡುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಇಬ್ಬರ ನಡುವೆ ಗಲಾಟೆ ಆಗುತ್ತಿತ್ತು. ತನ್ನ ಪತ್ನಿ ಬೇರೆಯವರ ಸಹವಾಸ ಮಾಡಿದ್ದಾಳೆ ಎಂದು ಶಂಕರ್ ಹೇಳಿಕೊಂಡಿದ್ದ. ಇದೇ ಕಾರಣಕ್ಕೆ ಮರ್ಯಾದೆಗೆ ಅಂಜಿ ಕೊಲೆ ಮಾಡಿದ್ದಾನೆ ಅಂತಾರೆ ಸಂಬಂಧಿ ರಾಜೇಶ್ವರಿ.