Kornersite

Extra Care Just In Maharashtra Relationship State

ಮಗಳ ಮದುವೆಯನ್ನು ಸ್ಮಶಾನದಲ್ಲಿ ಮಾಡಿಸಿದ ತಂದೆ. ಹೀಗ್ಯಾಕೆ ಮಾಡಿದ್ದು ಗೊತ್ತಾ..?

ಮದುವೆ ಅನ್ನೋದು ಒಂದು ಮಧುರವಾದ ಸಂಬಂಧ. ಮದುವೆಗಳು ಕಲ್ಯಾಣ್ ಮಂಟಪದಲ್ಲಿ, ದೇವಸ್ಥಾನದಲ್ಲಿ, ಮನೆಯಲ್ಲಿ. ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ನಡೆಯೋದನ್ನ ನೋಡಿದ್ದೇವೆ. ಮದುವೆ ಬಗ್ಗೆ ಮಧುಮಗಳು ಎಷ್ಟು ಕನಸು ಕಂಡಿರುತ್ತಾಳೋ ಅಷ್ಟೇ ಕನಸನ್ನು ತಂದೆ ಕೂಡ ಕಂಡಿರುತ್ತಾರೆ. ನನ್ನ ಮಗಳ ಮದುವೆಯನ್ನು ನಾಲ್ಕು ಜನ ನೋಡಿ ಅಬ್ಬಾ ಎಷ್ಟು ಚೆನ್ನಾಗಿ ಮದುವೆ ಮಾಡಿಕೊಟ್ಟರು ಎಂದು ಹೇಳುವಂತೆ ಮಾಡಬೇಕು ಎಂಬ ಕನಸು ಕಂಡಿರುತ್ತಾರೆ. ಆದ್ರೆ ಇಲ್ಲೊಬ್ಬ ತನ್ನ ಮಗಳ ಮದುವೆಯನ್ನು ಸ್ಮಶಾನದಲ್ಲಿ ಮಾಡಿದ್ದಾನೆ. ಈ ಘಟನೆ ನಡೆದಿದ್ದು ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ.

ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ನಡೆದ ಈ ಮದುವೆ ಇದೀಗ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಮದುವೆಯನ್ನು ಒಳ್ಳೆಯ ಜಾಗದಲ್ಲಿ, ಒಳ್ಳೆಯ ದಿನದಲ್ಲಿ ಮಾಡಬೇಕು ಅನ್ನೋದು ಎಲ್ಲರ ನಂಬಿಕೆ. ಆದರೆ ಈ ಮದುವೆ ನಡೆದಿರೋದು ಮಾತ್ರ ಹೊತ್ತಿ ಉರಿಯುತ್ತಿರುವ ಚಿತೆ, ಸುಟ್ಟು ಹೋದ ಶವದ ಬೂದಿಯ ನಡುವೆ. ಯಾರೂ ಕೂಡ ಊಹಿಸಲು ಕೂಡ ಸಾಧ್ಯವಿಲ್ಲ.

ಗಂಗಾಧರ್ ಗಾಯಕ್ವಾಡ್ ಕುಟುಂಬವು ಮಸಣಜೋಗಿಯಾಗಿ ಜೀವನ ಸಾಗುತ್ತಿದೆ. ಬೇರೆಯವರಿಗೆ ಅಶುಭ ಹಾಗೂ ಕೆಟ್ಟದ್ದು ಎಂದು ಹೇಳುವ ರುದ್ರಭೂಮಿಯೇ ಈ ಕುಟುಂಬದ ಜೀವನೋಪಾಯದ ಕರ್ಮಭೂಮಿ. ಇದೀಗ ಮಗಳ ಮದುವೆಯ ಮಂಟಪವೂ ಆಗಿದೆ. ಸ್ಮಶಾನದಲ್ಲಿಯೇ ಮಂಟಪ ಹಾಕಿ ಅಲಂಕರಿಸಿ ಸಂಪ್ರದಾಯಿಕವಾಗಿ ಮದುವೆ ಮಾಡಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ