ಫೋನ್ ಚಾರ್ಜ್ (Phone Charge) ಗೆ ಇಟ್ರೆ ನಿಮ್ಮ ಹಣ ಮಂಗಮಾಯವಾಗುತ್ತದೆ. ನಿಜ ಕಣ್ರೀ ಸಾರ್ವಜನಿಕ ಸ್ಥಳದಲ್ಲಿ ನಿಮ್ಮ ಫೋನ್ ನ್ನ ಏನಾದ್ರು ಚಾರ್ಜ್ ಗೆ ಇಟ್ರೆ ಸಾಕು ಹಣ ಮಂಗಮಾಯವಾಗುತ್ತದೆ. ಹುಷಾರಾಗಿರಿ ಎಂದು ಆರ್ ಬಿ ಐ (RBI) ವಾರ್ನಿಂಗ್ ನೀಡಿದೆ.
ಇದೀಗ ಹೊಸ ರೀತಿಯ ಸ್ಕ್ಯಾಮ್ ಶುರುವಾಗಿದೆ. ಸಾರ್ವಜನಿಕ ಸ್ಥಳದಲ್ಲಿ (Public Place)ಮೊಬೈ ಫೋನ್ ಚಾರ್ಜ್ ಹಾಕಿದ್ರೆ ಎಚ್ಚರದಿಂದ ಇರಬೇಕು. ಸ್ವಲ್ಪ ಯಾಮಾರಿದ್ರೆ ಸಾಕು ನಿಮ್ಮ ಹಣ ಮಂಗಮಾಯವಾಗೋದಂತೂ ನಿಜ. ಇತ್ತೀಚಿನ ದಿನಗಳಲ್ಲಿ ಕೆಲವು ವಂಚಕರು ‘ಜ್ಯೂಸ್ ಜಾಕಿಂಗ್’ ಹಗರಣದ ಮೂಲಕ ಜನರನ್ನು ತಮ್ಮ ಜಾಲದಲ್ಲಿ ಸಿಲುಕಿಸುತ್ತಿದ್ದಾರೆ. ಇದರ ಬಗ್ಗೆ ಆರ್ ಬಿಐ ಎಚ್ಚರಿಕೆಯನ್ನ ನೀಡಿದೆ.
ಜ್ಯೂಸ್ ಜಾಕಿಂಗ್ ಒಂದು ಬಿಗ್ ಸ್ಕ್ಯಾಮ್. ಈ ಮೂಲಕ ಸೈಬರ್ ಕ್ರಿಮಿನಲ್ ಗಳು ನಿಮ್ಮ ಮೊಬೈಲ್ ನಿಂದ ಪ್ರಮುಖ ಡಾಟಾವನ್ನು ಕದಿಯುತ್ತಾರೆ. ಖದೀಮರು ಯುಎಸ್ ಬಿ ಪೋರ್ಟ್ ಹಾಗೂ ಚಾರ್ಜಿಂಗ್ ಕಿಯೋಸ್ಕ್ ಗಳಂತಹ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಗಳ ಮೂಲಕ ಜನರನ್ನು ಬಲಿಪಶುಗಳನ್ನಾಗಿ ಮಾಡುತ್ತಾರೆ.
ಮೊಬೈಲ್ ಚಾರ್ಜಿಂಗ್ ಪೋರ್ಟ್ ನ್ನು ಮೊಬೈಲ್ ನಲ್ಲಿರುವ ಡಾಟಾ ವರ್ಗಾವಣೆಗೆ ಬಳಸಬಹುದು. ಹೀಗೆ ಮಾಡಿದ್ರೆ ನಿಮ್ಮ ಮೊಬೈಲ್ ನಲ್ಲಿರುವ ಎಲ್ಲ ಡಿಟೈಲ್ಸ್ ವಂಚಕರ ಕೈಗೆ ಸೇರುತ್ತದೆ.