ಸೆಲೆಬ್ರಿಟಿಗಳು ಫಿಟ್ನೆಸ್ ಗೆ ಮೊದಲ ಆದ್ಯತೆ ನೀಡುತ್ತಾರೆ. ಹೀಗಾಗಿಯೇ ಅವರು ಲಕ್ಷಾಂತರ ಖರ್ಚು ಮಾಡುತ್ತಾರೆ. ಆಹಾರದಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ. ಅಲ್ಲದೇ, ಅವರು ಪ್ರತ್ಯೇಕ ಜಿಮ್ ಟ್ರೇನರ್ ಇಟ್ಟುಕೊಂಡಿರುತ್ತಾರೆ. ಅವರಿಗೆ ಪ್ರತಿ ತಿಂಗಳು ದೊಡ್ಡ ಮೊತ್ತದ ಸಂಭಾವನೆ ನೀಡುತ್ತಾರೆ.
‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಿಂದ ಆಲಿಯಾ ಭಟ್ ಗುರುತಿಸಿಕೊಂಡಿದ್ದಾರೆ. ಪ್ರೀತಿಸಿದ ರಣಬೀರ್ ಕಪೂರ್ ಜೊತೆ ಮದುವೆ ಆದರು. ಈಗ ಮಗು ಕೂಡ ಇದೆ. ಮಗಳು ಜನಿಸಿದ ಬಳಿಕವೂ ಆಲಿಯಾ ಫಿಟ್ನೆಸ್ ಕಾಪಾಡಿಕೊಂಡು ಹೋಗುತ್ತಿದ್ದಾರೆ. ಆಲಿಯಾಗೆ ಯಾಸ್ಮಿನ್ ಕರಾಚಿವಾಲ ಟ್ರೇನ್ ಮಾಡುತ್ತಿದ್ದು, ತಿಂಗಳಿಗೆ 45 ಸಾವಿರ ರೂ. ಸಂಬಳ ಪಡೆಯುತ್ತಿದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್ ಸಿಂಡಿ ಜಾರ್ಡಿಯನ್ ಟ್ರೇನ್ ಮಾಡುತ್ತಾರೆ. ಇವರು ತಿಂಗಳಿಗೆ 30 ಸಾವಿರ ರೂಪಾಯಿ ಪಡೆಯುತ್ತಿದ್ದಾರೆ. ಕಂಗನಾ ರಣಾವತ್ ಅವರು ಸದಾ ವಿವಾದ ಮೂಲಕವೇ ಸುದ್ದಿ ಆಗುತ್ತಾರೆ. ಹಾಗಂತ ಅವರು ಫಿಟ್ನೆಸ್ ಬಗ್ಗೆ ನಿರ್ಲಕ್ಷ್ಯ ತೋರುವುದಿಲ್ಲ. ಕಂಗನಾ ಅವರನ್ನು ಯೋಗೇಶ್ ಭತೀಜಾ ಟ್ರೇನ್ ಮಾಡುತ್ತಾರೆ. ಅವರು ತಿಂಗಳಿಗೆ ರೂ. 45 ಸಾವಿರ ಪಡೆಯುತ್ತಾರೆ.
ನಟಿ ಕತ್ರಿನಾ ಕೈಫ್ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಯಾಸ್ಮಿನ್ ಕರಾಚಿವಾಲಾ ಅವರೇ ಟ್ರೇನ್ ಮಾಡುತ್ತಾರೆ. ಅವರು ತಿಂಗಳಿಗೆ 45 ಸಾವಿರ ರೂ. ಪಡೆಯುತ್ತಾರೆ. ಹೀಗೆ ಪ್ರತಿಯೊಬ್ಬ ನಟಿಯೂ ತಮ್ಮ ಫಿಟ್ನೆಸ್ ಗೆ ಲಕ್ಷಾಂತರ ರೂ.ಗಳನ್ನು ವ್ಯಯಿಸುತ್ತಾರೆ.