ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಕೈಗೊಳ್ಳಲಿ ಎಂಬ ನಿಟ್ಟಿನಲ್ಲಿ ಹೊಸ ಫೀಚರ್ ಅನ್ನು ಗೂಗಲ್ ಫ್ಲೈಟ್ಸ್ ಪರಿಚಯಿಸಿದೆ.
ಸೋಮವಾರವಷ್ಟೇ ಬ್ಲಾಗ್ ಪೋಸ್ಟ್ ಮೂಲಕ ಗೂಗಲ್ ಮಾಹಿತಿ ನೀಡಿದೆ. ವಿಮಾನ ಟಿಕೆಟ್ ಗಳನ್ನು ಬುಕ್ ಮಾಡಲು ಯಾವ ಅವಧಿ ಹೆಚ್ಚು ಬಜೆಟ್ ಸ್ನೇಹಿಯಾಗಿದೆ ಎಂಬ ಮಾಹಿತಿಯನ್ನು ಇದು ಒದಗಿಸಲಿದೆ.
ಪ್ರೈಸ್ ಟ್ರ್ಯಾಕಿಂಗ್ ಅಲರ್ಟ್ಸ್ ಹಾಗೂ ಪ್ರೈಸ್ ಗ್ಯಾರಂಟಿ ಆಯ್ಕೆಗಳಿಗೆ ಪೂರಕವಾಗಿ ಇದು ಕಾರ್ಯನಿರ್ವಹಿಸಲಿದೆ. ಹೊಸ ಫೀಚರ್ ಮೂಲಕ ವಿಮಾನ ಟಿಕೆಟ್ ಗಳನ್ನು ಬುಕ್ ಮಾಡಲು ಯಾವ ಸಮಯ ಅತ್ಯಂತ ಅಗ್ಗವಾಗಿದೆ ಎಂಬೆಲ್ಲ ಮಾಹಿತಿಯನ್ನು ಇದು ನೀಡುತ್ತದೆ.
ಬೆಲೆ ಗ್ಯಾರಂಟಿ ನೀಡುವ ಕುರಿತು ಕೂಡ ಗೂಗಲ್ ಫ್ಲೈಟ್ ಬ್ಲಾಗ್ ಪೋಸ್ಟ್ ನಲ್ಲಿ ಮಾಹಿತಿ ನೀಡಿದೆ.
ಗೂಗಲ್ ಪ್ರಕಾರ ಡಿಸೆಂಬರ್ ಮಧ್ಯ ಭಾಗದಲ್ಲಿ ಪ್ರವಾಸ ಕೈಗೊಳ್ಳಲು ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಪಡೆಯಲು ಅಕ್ಟೋಬರ್ ಪ್ರಾರಂಭದಲ್ಲಿ ಟಿಕೆಟ್ ಮಾಡುವುದು ಉತ್ತಮ. ವಿಮಾನದ ಸರಾಸರಿ ಬೆಲೆ ಅದು ಹೊರಡುವ ದಿನಕ್ಕಿಂತ 71 ದಿನಗಳ ಮುನ್ನ ಕಡಿಮೆ ಇರುತ್ತದೆ. 2022ರ ನಮ್ಮ ಅಧ್ಯಯನದ ಪ್ರಕಾರ ವಿಮಾನ ಹೊರಡುವ ಕೇವಲ 22 ದಿನಗಳ ಮುಂಚೆ ಅದರ ಟಿಕೆಟ್ ದರ ಕಡಿಮೆ ಇರುತ್ತದೆ. ಹೀಗೆ ಇದು ಕಾರ್ಯನಿರ್ವಹಸಲಿದೆ.