ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಳ್ಳುವ ಆಟವಾಡುವ ವೇಳೆ ನಿಜವಾಗಿಯೂ ಸಾವನ್ನಪ್ಪಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಜಲೌನ್ ನಲ್ಲಿ ಈ ಘಟನೆ ನಡೆದಿದ್ದು, 13 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಜಲೌನ್ನ ಒರೈಯ ಕಾನ್ಶಿರಾಮ್ ಕಾಲೋನಿಯಲ್ಲಿ ವಾಸಿಸುತ್ತಿರುವ 50 ವರ್ಷದ ಸಂಗೀತಾ ಎಂಬುವವರ ಮಗನೇ ಸಾವನ್ನಪ್ಪಿದ್ದಾನೆ. ಬಾಲಕನ ತಾಯಿ ಹುಟ್ಟಿನಿಂದಲೇ ಅಂಧರಾಗಿದ್ದು, ಘಟನೆಯ ಸಂದರ್ಭದಲ್ಲಿ ಇದ್ದರೂ ಮಗನನ್ನು ರಕ್ಷಿಸಲು ಆಗಿಲ್ಲ.
ಬಾಲಕ ತನ್ನ ಸಹೋದರ ಮತ್ತು ಸಹೋದರಿಯರು ಹಗ್ಗದಿಂದ ಕುಣಿಕೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ಬಾಲಕ ನಿಂತಿದ್ದ ಸ್ಟೂಲ್ ಜಾರಿ ಬಿದ್ದಿದೆ. ಹೀಗಾಗಿ ಸಾವನ್ನಪ್ಪಿದ್ದಾನೆ. ಮಕ್ಕಳು ಇದನ್ನು ಕಂಡು ಚೀರಾಡಿದರೂ ಪಕ್ಕದಲ್ಲಿದ್ದ ತಾಯಿಗೆ ಇದರ ಅರಿವೇ ಇಲ್ಲ. ಮಕ್ಕಳ ಕಿರುಚಾಟದ ಶಬ್ದ ಕೇಳಿ ಅಕ್ಕಪಕ್ಕದಲ್ಲಿ ವಾಸವಿದ್ದ ಕೆಲವರು ಸ್ಥಳಕ್ಕಾಗಮಿಸಿ ಮಗುವನ್ನು ಕುಣಿಕೆಯಿಂದ ಕೆಳಗಿಳಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಿ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.