15 ಅಡಿ ಉದ್ದದ ಹೆಬ್ಬಾವೊಂದು ಮೇಕೆ ನುಂಗಲು ಯತ್ನಿಸಿರುವ ಘಟನೆ ನಡೆದಿದೆ.
ತುಮಕೂರಿನ ಕೊರಟಗೆರೆ ತಾಲೂಕಿನ ಮಣವಿನಕುರಿಕೆಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ವೆಂಕಟರಮಣ ಅವರ ಹೊಲದಲ್ಲಿ ಪತ್ತೆಯಾಗಿರುವ ಹೆಬ್ಬಾವು, ಸುಮಾರು 15 ಅಡಿ ಉದ್ದ, ಅಂದಾಜು 20ಕೆಜಿ ತೂಕವಿದೆ.
ಮೇಯಲು ಹೋಗುತ್ತಿದ್ದ ಮೇಕೆಯನ್ನ ಬೆನ್ನಟ್ಟಿ ನುಂಗಲು ಯತ್ನಿಸಿದೆ. ಇದನ್ನು ಕಂಡ ಜನರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಉರಗ ರಕ್ಷಕ ದಿಲೀಪ್ ಅವರೊಂದಿಗೆ ಅರಣ್ಯಾಧಿಕಾರಿಗಳು, ತೆರಳಿ ಹೆಬ್ಬಾವು ಹಿಡಿದು, ಅರಣ್ಯಕ್ಕೆ ಬಿಟ್ಟಿದ್ದಾರೆ.