Kornersite

International Just In

ಕೆನಡಾದಲ್ಲಿ ಭಾರತೀಯರು ಸುರಕ್ಷಿತರಾಗಿದ್ದಾರೆಯೇ?

ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಸಂಬಂಧ ದಿನದಿಂದ ದಿನಕ್ಕೆ ಹದಗೆಡುತ್ತ ಸಾಗುತ್ತಿದೆ. ಎರಡೂ ದೇಶಗಳು ಈಗಾಗಲೇ ರಾಜತಾಂತ್ರಿಕ ಅಧಿಕಾರಿಗಳಿಗೆ ಹೊರ ಹೋಗುವಂತೆ ಹೇಳಿವೆ. ಕೆನಡಾದಲ್ಲಿನ ಖಲಿಸ್ತಾನ ಪ್ರತ್ಯೇಕತಾವಾದಿಗಳು, ಕೆನಡಾ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ.

ಈ ಬೆದರಿಕೆ ಕುರಿತು ಕೆನಡಾ ಸರ್ಕಾರ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ತೀವ್ರ ಕಳವಳಕ್ಕೆ ಕಾರಣವಾಗಿವೆ. ಇವೆಲ್ಲವುಗಳ ನಡುವೆಯೇ ಹಲವು ರಾಷ್ಟ್ರಗಳಿಗೆ ಭಾರತದ ಪರ ನಿಲ್ಲಬೇಕೆ? ಕೆನಡಾ ಪರ ನಿಲ್ಲಬೇಕೆ? ಎಂಬ ವಿಷಯ ತಲೆ ಕೆಡಿಸುತ್ತಿದೆ. ಕೆನಡಾದಲ್ಲಿ ಭಾರತದ ಸುಮಾರು 13 ಲಕ್ಷದಷ್ಟು ಜನರು ಇದ್ದಾರೆ. ಈ ಬೆಳವಣಿಗೆಗಳು ಅವರನ್ನು ಬಾಧಿಸುತ್ತವೆಯೇ? ಕೆನಡಾದಲ್ಲಿ ಅವರೆಲ್ಲರೂ ಸುರಕ್ಷಿತವೇ? ಎಂಬ ಪ್ರಶ್ನೆಗಳು ಈಗ ಉದ್ಭವವಾಗಿವೆ.

ಕೆನಡಾದಲ್ಲಿನ ಭಾರತೀಯರು ಮರಳಿ ಹೋಗಬೇಕು. ನಿಮಗೆ ಸೆಪ್ಟೆಂಬರ್ 25ರ ವರೆಗೆ ಸಮಯ ನೀಡುತ್ತೇವೆ. ನೀವು ಹೋಗದಿದ್ದರೆ, ಮುಂದೆ ನಡೆಯುಲ ಎಲ್ಲ ಕೃತ್ಯಗಳಿಗೆ ನೀವೆ ಹೊಣೆಗಾರರಾಗಬೇಕಾಗುತ್ತದೆ ಎಂದು ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಹೇಳಿದ್ದಾನೆ. ಆದರೆ, ಈಗಾಗಲೇ ಬಹುತೇಕರು ಇದು ಇಲ್ಲಿಗೆ ಅಂತ್ಯವಾಗಲಿ. ಎಲರೂ ದೇಶಗಳು ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ಮಾತನಾಡುತ್ತಿದ್ದಾರೆ.

You may also like

International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು
International Tech

ಹಾರಿ ಹೋದ ನೀಲಿ ಹಕ್ಕಿ- ಜಾಗ ತುಂಬಿದ ನಾಯಿ

Washington : ಟ್ವಿಟ್ಟರ್ ಸಿಇಓ ಎಲಾನಾ ಮಸ್ಕ್ ಟ್ವಿಟ್ಟರ್ ಖರೀದಿಸಿದಾಗಿನಿಂದ ಹೆಚ್ಚು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ್ದು, ದೊಡ್ಡ