ಇತ್ತೀಚೆಗೆ ಯುವ ಪೀಳಿಗೆ ರೀಲ್ಸ್ ವ್ಯಾಮೋಹಕ್ಕೆ ಸಿಲುಕಿದ್ದು, ಸಾವನ್ನು ಕೂಡ ಆಹ್ವಾನಿಸುತ್ತಿದ್ದಾರೆ. ಈ ಸಾಲಿಗೆ ಮತ್ತೊಂದು ಸಾವಿನ ಪ್ರಕರಣ ಸೇರಿದೆ.
ಉತ್ತರಪ್ರದೇಶದ ಬಾರಾಬಂಕಿಯಲ್ಲಿ ರೀಲ್ಸ್ ಮಾಡಲು ಹೋಗಿ ಅಪ್ರಾಪ್ತ ಬಾಲಕ ಸಾವನ್ನಪ್ಪಿದ್ದಾನೆ. ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ರೈಲು ಡಿಕ್ಕಿ ಹೊಡೆದು ಬಾಲಕ ಸಾವನ್ನಪ್ಪಿದ್ದಾನೆ. ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈತ ಸಾಯುವ ಕೊನೆ ಕ್ಷಣದ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. 14 ವರ್ಷದ ಫಾರ್ಮನ್ ಎಂಬ ಬಾಲಕ ರೀಲ್ಸ್ ಮಾಡುತ್ತಿದ್ದಾಗ ರೈಲ್ವೆ ಹಳಿ ಸಮೀಪ ಹಳಿ ಮೇಲೆ ಕಾಲಿಡುತ್ತಿದ್ದಂತೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಈ ವೇಳೆ ಫಾರ್ಮನ್ ಗೆಳೆಯ ವಿಡಿಯೋ ರೆಕಾರ್ಡ್ ಮಾಡುತ್ತಿದ್ದು, ಏಕಾಏಕಿ ಸಂಭವಿಸಿದ ಘಟನೆಯಿಂದ ಆತ ಆಘಾತಗೊಂಡಿದ್ದಾನೆ ಎಂದು ವರದಿಯಾಗಿದೆ. ಫಾರ್ಮನ್ ಉತ್ತರ ಪ್ರದೇಶದ ಜಹಾಂಗೀರ್ ಬಾದ್ ನ ತೇರಾ ದೌಲತ್ ಪುರದ ನಿವಾಸಿ ಮುನ್ನ ಎಂಬುವವರ ಪುತ್ರ ಎನ್ನಲಾಗಿದೆ.