ಗ್ಯಾಸ್ ಕಟರ್ ಬಳಸಿ ATM ನಲ್ಲಿದ್ದ 15 ಲಕ್ಷ ದರೋಡೆ
ಗ್ಯಾಸ್ ಕಟರ್ (Gas Cutter) ನಿಂದ ಎಟಿಎಂನಲ್ಲಿದ್ದ (ATM) ಲಕ್ಷಾಂತರ ರೂ. ಹಣವನ್ನು ಖದೀಮರು ಎಗರಿಸಿ ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹಂಚಾಳ ಗೇಟ್ನ ಕೆನರಾ ಬ್ಯಾಂಕ್ ಎಟಿಎಂನ ಮಿಷನ್ ಅನ್ನು ಗ್ಯಾಸ್ ಕಟರ್ನಿಂದ ಕೊರೆದ ಖದೀಮರು, ಹಣ ದೋಚಿ ಪರಾರಿಯಾಗಿದ್ದಾರೆ. ಸುಮಾರು 15 ಲಕ್ಷ ರೂ. ಹಣ ಎಗರಿಸಿರುವ ಮಾಹಿತಿಯನ್ನು ಬ್ಯಾಂಕ್ ಸಿಬ್ಬಂದಿ ನೀಡಿದ್ದು, ಸ್ಥಳಕ್ಕೆ ಕೆಜಿಎಫ್ ಡಿವೈಎಸ್ಪಿ ರಮೇಶ್ ಸೇರಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ […]
