Kornersite

Bengaluru Just In Karnataka Politics State

ಕಾಂಗ್ರೆಸ್ ನವರಿಗೆ ಎಚ್ಚರಿಕೆ ಕೊಟ್ಟ ವಿಜಯೇಂದ್ರ

ಬೆಂಗಳೂರು: ಬಿಜೆಪಿ(BJP) ನೂತನ ರಾಜ್ಯಾಧ್ಯಕ್ಷರಾದ ಮೊದಲನೇ ದಿನ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ ವಿಜಯೇಂದ್ರ(BY Vijayendra). ಬೂತ್ ಗೆದ್ದರೆ ದೇಶ ಗೆಲ್ತೇವೆ ಎಂಬುದು ಅಮಿತ್ ಶಾ(Amit shah) ಹಾಗೂ ಜೆ.ಪಿ ನಡ್ಡಾ(J.P Nadda) ಅವರ ವಿಶ್ವಾಸವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಬೂತ್‍ಗಳಲ್ಲಿಯೂ ಪಕ್ಷದ ಸಂಘಟನೆಯನ್ನು ಬಲ ಪಡಿಸುತ್ತೇವೆ ಎಂದು ಹೇಳಿದ್ದಾರೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯ ದೃಷ್ಟಿಯಿಂದ ಪಕ್ಷದ ರಾಜ್ಯಾಧ್ಯಕ್ಷನಾದ ಮೊದಲ ದಿನವೇ ಬೂತ್ ಅಧ್ಯಕ್ಷ ಶಶಿಧರ್ ಮನೆಗೆ ಬಂದಿದ್ದೇನೆ. ಈಗಿನ ಘಟಾನುಘಟಿ ನಾಯಕರೆಲ್ಲ ಬೂತ್ ಅಧ್ಯಕ್ಷರಾಗಿ […]

Bengaluru Just In Karnataka State

ರಾಜ್ಯದ ಈ ಜಿಲ್ಲೆಗಳಲ್ಲಿ ಇರಲಿದೆ ಮಳೆಯ ಆರ್ಭಟ

ರಾಜ್ಯದಲ್ಲಿ ಎರಡು ದಿನಗಳ ಕಾಲ ಉತ್ತಮ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ. ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದ.ಕನ್ನಡ, ಉಡುಪಿ, ಉ.ಕನ್ನಡ, ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಯಾದಗಿರಿ, ಚಿಕ್ಕಮಗಳೂರು, ಕೊಡಗು ಹಾಗೂ ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಇಂದು ಹಾಗೂ ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳು ಕರಾವಳಿಯ ಬಹುತೇಕ ಕಡೆಗಳಲ್ಲಿ ಉತ್ತರ ಒಳನಾಡಿನ ಹಲವು ಕಡೆ ಮತ್ತು […]

Bengaluru Just In Karnataka State Uncategorized

ಬೆಂಗಳೂರಿನಲ್ಲಿ ʼʼದಿ ಅರವಿಂದ್ ಸ್ಟೋರ್ʼʼ ನ 17 ನೇ ಮಳಿಗೆ ಆರಂಭ

ಸಿದ್ದು ಉಡುಪು ಹಾಗು ಜವಳಿ ಉತ್ಪನ್ನಗಳಲ್ಲಿ ಹೆಸರುವಾಸಿಯಾಗಿರುವ ದೇಶದ ಹೆಮ್ಮೆಯ ಸಂಸ್ಥೆಯಾಗಿರುವ ಅರವಿಂದ್ ಲಿಮಿಟೆಡ್ ತನ್ನ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುವ ನಿಟ್ಟಿನಲ್ಲಿ 17ನೇ ಮಳಿಗೆ ಆರಂಭಿಸಿದೆ. ಉನ್ನತ ದರ್ಜೆಯ ಸಿದ್ದ ಉಡುಪುಗಳ ರೀಟೇಲ್ ಮಾರಟದ ಈ ನೂತನ ಮಳಿಗೆಯನ್ನು ಬೆಂಗಳೂರಿನ ಜಯನಗರದಲ್ಲಿ ಆರಂಭಿಸಿದೆ. ಇದು ಬೆಂಗಳೂರಿನಲ್ಲಿ ದಿ ಅರವಿಂದ್ ಸ್ಟೋರ್ ನ 17 ನೇ ಕೇಂದ್ರವಾಗಿದೆ. ಈ ಮಳಿಗೆಯಲ್ಲಿ ಅರವಿಂದ್ ಲಿಮಿಟೆಡ್ ತಯಾರಿಸುವ ಬಟ್ಟೆಗಳು, ಸಿದ್ದ ಉಡುಪುಗಳು ಹಾಗೂ ವಿವಿಧ ಮಾಧರಿಯ ಪ್ರಖ್ಯಾತ ಕಂಪನಿಗಳ ಸಿದ್ದ ಉಡುಪುಗಳನ್ನು […]

Bengaluru Just In State

ಚಲಿಸುವ ರೈಲಿನ ಕೆಳಗೆ ಸಿಕ್ಕರೂ ಸಾವು ಗೆದ್ದ ಮಹಿಳೆ!

ರೈಲಿನಡಿ ನುಗ್ಗಿ ದಾಟುತ್ತಿದ್ದ ಸಂದರ್ಭದಲ್ಲಿ ರೈಲಿನಲ್ಲಿ ಸಿಲುಕಿದ ಮಹಿಳೆಯೊಬ್ಬರು ಕೊನೆಗೆ ಪ್ರಾಣ ಉಳಿಸಿಕೊಂಡ ಘಟನೆಯೊಂದು ನಡೆದಿದೆ. ಹಳಿ ಮಧ್ಯೆ ಮಲಗಿ ಪ್ರಾಣ ಉಳಿಸಿಕೊಂಡ ಘಟನೆ ರಾಜಾನುಕುಂಟೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೊ ವೈರಲ್‌ ಆಗಿದೆ. ಈ ಭಾಗದ ಪಾರ್ವತಿಪುರ, ಅದ್ದಿಗಾನಹಳ್ಳಿ, ತರಹುಣಸೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು, ಕಾರ್ಮಿಕರು, ವಿದ್ಯಾರ್ಥಿಗಳು ರಾಜಾನುಕುಂಟೆ ತಲುಪಲು ರೈಲು ಹಳಿ ದಾಟಿ ಸಾಗಬೇಕಿದೆ. ರೈಲ್ವೆ ಕ್ರಾಸಿಂಗ್‌ ಸಮಯದಲ್ಲಿ ಗೂಡ್ಸ್‌ ರೈಲುಗಳು ನಿಂತಿರುತ್ತವೆ. ಹೀಗಾಗಿ ರೈಲಿನಡಿ ನುಗ್ಗಿ ದಾಟುತ್ತಾರೆ. ಹೀಗೆ ಅದ್ದಿಗಾನಹಳ್ಳಿ ನಿವಾಸಿ […]

Just In Karnataka State

ರಾಜ್ಯದಲ್ಲಿ ಮತ್ತೆ ಮಳೆಯ ಮುನ್ಸೂಚನೆ; ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್!

ರಾಜ್ಯದಲ್ಲಿ ಕೆಲವು ದಿನಗಳಿಂದ ಕೈ ಕೊಟ್ಟಿದ್ದ ಮಳೆರಾಯ ಇಂದಿನಿಂದ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಒಳನಾಡಿನ ಪ್ರತ್ಯೇಕ ಭಾಗಗಳಲ್ಲಿ ಸಿಡಿಲು, ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದ ಕೊಡಗು, ಮೈಸೂರು, ಚಿಕ್ಕಮಗಳೂರು, ಹಾಸನ, ತುಮಕೂರು, ರಾಮನಗರ, ಬೆಳಗಾವಿ, ಬಾಗಲಕೋಟೆ, ಬೀದರ್ ಮತ್ತು ಕೋಲಾರದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ ತಿಂಗಳ ಮಳೆಯ ಅಂಕಿ ಅಂಶಗಳನ್ನು ಗಮನಿಸುವುದಾದರೆ ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ ಶೇ. 74ರಷ್ಟು ಮಳೆ ಕೊರತೆಯಾಗಿದೆ.

Crime Just In Karnataka State

ಮಾಡೆಲ್ ವಿದ್ಯಾಶ್ರೀ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್!!

ಬೆಂಗಳೂರಿನ ಮಾಡೆಲ್ ವಿದ್ಯಾಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಾಡೆಲ್ ಆತ್ಮಹತ್ಯೆಯ ಹಿಂದೆ ಫೇಸ್ ಬುಕ್ ಪ್ರಿಯಕರನಿಂದ ಲವ್, ಸೆಕ್ಸ್, ದೋಖಾ ಆಗಿರುವ ಬಗ್ಗೆ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ವಿದ್ಯಾಶ್ರೀ ಮಾಡಲಿಂಗ್ ಜೊತೆಗೆ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದಳು. ವಿದ್ಯಾಶ್ರೀ ಜೂಲೈ 21 ರಂದು ಕೆಂಪಾಪುರದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೀಗ ವಿದ್ಯಾಶ್ರೀ ಬರೆದಿಟ್ಟ್ ಡೆತ್ ನೋಟ್ ಪತ್ತೆಯಾಗಿದೆ. ಈ ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಲವರ್ ಅಕ್ಷಯ್ ಕಾರಣ ಎಂದು […]

Crime Just In Karnataka State

ನಿಮ್ಮ ಮಗಳನ್ನು ಕೊಂದಿದ್ದೇನೆ ಬನ್ನಿ ಎಂದು ಅತ್ತೆಗೆ ಕರೆ ಮಾಡಿದ ಅಳಿಯ

Bangalore: ತನ್ನ ಪತ್ನಿಯನ್ನು ಕೊಲೆ ಮಾಡಿ ನಂತರ ಅತ್ತೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ ಅಳಿಯ. ಈ ಘಟನೆ ನಡೆದಿರೋದು ಬೆಂಗಳೂರಿನ ಮೂಡಲಪಾಳ್ಯದ ಶಿವಾನಂದ ನಗರದಲ್ಲಿ. ಅತ್ತೆಗೆ ಕರೆ ಮಾಡಿ ನಿಮ್ಮ್ ಮಗಳನ್ನು ಮರ್ಡರ್ ಮಾಡಿದ್ದೇನೆ ಬನ್ನಿ ಎಂದು ಕರೆದಿದ್ದಾನೆ ಆರೋಪಿ ಶಂಕರ್. ಅಸಲಿಗೆ ಶಂಕರ್ ಹಾಗೂ ಕೊಲೆಯಾದ 33 ವರ್ಷದ ಗೀತಾ ನಡುವೆ ಆಗ್ಗಾಗ್ಗೆ ಜಗಳವಾಗುತ್ತಿತ್ತು. ಗೀತಾಳಿಗೆ ಅಕ್ರಮ ಸಂಬಧ ಇತ್ತು ಅನ್ನೋದು ಶಂಕರ್ ನ ಆರೋಪ. ಇದೇ ಅನುಮಾನ ಕೊಲೆಯಲ್ಲಿ ಅಂತ್ಯವಾಗಿದೆ. ಪತ್ನಿಯ ಕೊಲೆಯ […]

Bengaluru Just In Karnataka State

ಬೆಂಗಳೂರಿನಲ್ಲಿ ದೊಡ್ಡ ಕಚೇರಿ ಖಾಲಿ ಮಾಡಿದ BYJU’S

ದೇಶದ ಅತಿದೊಡ್ಡ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜುಸ್ (Byju’s) ಹಲವಾರು ಸಂಕಷ್ಟಗಳಿಗೆ ಸಿಲುಕಿ ಬೆಂಗಳೂರಿನಲ್ಲಿನ ತನ್ನ ಬೃಹತ್ ಕಚೇರಿಯನ್ನು ಖಾಲಿ ಮಾಡುತ್ತಿದೆ ಎನ್ನಲಾಗಿದೆ. ಸಾವಿರಾರು ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದ ಬೈಜುಸ್, ಕಲ್ಯಾಣಿ ಟೆಕ್ ಪಾರ್ಕ್ನಲ್ಲಿರುವ 5.58 ಲಕ್ಷ ಚದರ ಅಡಿಯ ಕಚೇರಿ ಸ್ಥಳವನ್ನು ತೆರವುಗೊಳಿಸುತ್ತಿದೆ ಎಂದು ತಿಳಿದು ಬಂದಿದೆ. ಬೈಜುಸ್ ಸಂಸ್ಥೆ ಬೆಂಗಳೂರು ಮೂಲದ್ದಾಗಿದ್ದು ಇಲ್ಲಿ 3 ಕಚೇರಿಗಳನ್ನು ಹೊಂದಿದೆ. ಬ್ರೂಕ್ಫೀಲ್ಡ್ ಪ್ರದೇಶದಲ್ಲಿನ ಕಲ್ಯಾಣಿ ಟೆಕ್ ಪಾರ್ಕ್ನಲ್ಲಿನ ಅದರ ಕಚೇರಿ ಅತಿದೊಡ್ಡದು. ಬನ್ನೇರುಘಟ್ಟ ರಸ್ತೆಯಲ್ಲಿನ ಪ್ರೆಸ್ಟೀಜ್ […]

Bengaluru Just In Karnataka State

ಬೆಂಗಳೂರಲ್ಲಿ ಕಡಿಮೆ ಆಯ್ತು ಟೊಮೆಟೊ ಬೆಲೆ! ಕೆ.ಜಿಗೆ ಎಷ್ಟಿದೆ ಗೊತ್ತಾ..?

Tomato Price: ಟೊಮೆಟೊ ದರದಲ್ಲಿ ಇಳಿಕೆ ಕಂಡಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಟೊಮೆಟೊ ಬೆಲೆ ಇಳಿಕೆಯಾಗಿದೆ. ಬೆಂಗಳೂರಿನಾದ್ಯಂತ ಹಾಪ್ ಕಾಮ್ಸ್ ಘಟಕದಲ್ಲಿ ಟೊಮೆಟೊ ಪ್ರತಿ ಕೆ.ಜಿ ಗೆ 99 ರೂಪಾಯಿಗೆ ಮಾರಾಟವಾಗಿದೆ. ಆದರೆ ದುರಂತ ಅಂದರೆ ಟೊಮೆಟೊ ದರ ಕಡಿಮೆಯಾಗಿದ್ದರೂ ಕೂಡ ಚಿಲ್ಲರೆ ವ್ಯಾಪಾರಿಗಳು, ತಳ್ಳೋ ಗಾಡಿಯವರು ಮಾತ್ರ 120 ರಿಂದ 140 ರೂಪಾಯಿವರೆಗೂ ಮಾರಾಟವನ್ನು ಮೂಂದುವರೆಸಿದ್ದಾರೆ. ಒಂದು ತಿಂಗಳ ಹಿಂದೆ ಕೆ.ಜಿ ಗೆ 100 ರೂಪಾಯಿ ಇದ್ದ ಟೊಮೆಟೊ ಬೆಲೆ 140 ಕ್ಕೆ ಏರಿತ್ತು. ಆದರೆ […]

Bengaluru Just In Karnataka State

ಕನ್ನಡಿಗರಿಗೆ ಗುಡ್ ನ್ಯೂಸ್: ಏನದು..? ನೀವೇ ನೋಡಿ

Bangalore: CBSE ಶಾಲೆಗಳಲ್ಲಿ(CBSE school) ಇಂಗ್ಲೀಷ (English) ಭಾಷೆಯ ಪಟ್ಯಪುಸ್ತಕಗಳು ಇದ್ದವು. ಆದರೆ ಇದೀಗ ಸಿಬಿಎಸ್ ಇ ಶಾಲೆಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡಲು ಕೇಂದ್ರ ಸರ್ಕಾರ ಪ್ರೌಢ ಶಿಕ್ಷಣ ಮಂಡಳಿ ಶಾಲೆಗಳಿಗೆ ಸೂಚನೆ ನೀಡಿದೆ. ನೂತನ ರಾಷ್ತ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಈ ಮಹತ್ವದ ಸೂಚನೆ ಹೊರಡಿಸಲಾಗಿದೆ. 2024ರ ಶೈಕ್ಷಣಿಕ ಸಾಲಿನಿಂದ ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿಯೂ ಶಿಕ್ಷಣ ನೀಡಬೇಕು ಎಂದು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಇಲ್ಲಿಯವರೆಗೆ ಸಿಬಿಎಸ್ ಇ ಶಾಲೆಗಳಿಲ್ಲಿ ಪಟ್ಯಪುಸ್ತಕಗಳು ಕೇವಲ ಇಂಗ್ಲೀಷ […]